ಬಲ್ನಾಡು ಗ್ರಾ.ಪಂ.ಉಪಚುನಾವಣೆ ಫಲಿತಾಂಶ; ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

Update: 2022-05-22 11:27 GMT
 ವಿನಯ

ಪುತ್ತೂರು : ತಾಲೂಕಿನ  ಬಲ್ನಾಡು ಗ್ರಾಮ ಪಂಚಾಯತ್ ನ ವಾರ್ಡ್-1ರ ಸದಸ್ಯೆ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 2ರಂದು ನಡೆದ ಉಪ ಚುನಾವಣೆಯ ಫಲಿತಾಂಶ ರವಿವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.

ಹಿಂದುಳಿದ ವರ್ಗ `ಎ' ಮಹಿಳಾ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಉಮಾವತಿ ಎಸ್. ಅಟ್ಟಾರು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿನಯ ಬೆಳೆಯೂರುಕಟ್ಟೆ ಸ್ಪರ್ಧಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನಯ ಅವರು ತಮ್ಮ ಪ್ರತಿಸ್ಪರ್ದಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾವತಿ ಅವರ ವಿರುದ್ಧ 265 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಚಲಾಯಿತ ಒಟ್ಟು 903 ಮತಗಳಲ್ಲಿ ವಿನಯ ಬೆಳಿಯೂರುಕಟ್ಟೆ 579, ಉಮಾವತಿ 314 ಮತ ಪಡೆದರು. 9 ಮತಗಳು ತಿರಸ್ಕೃತ ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News