ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಅಖ್ತರ್ ಅಹ್ಸನ್ ಸಈದ್‌ಗೆ ʼಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್‌ʼ

Update: 2022-05-22 13:54 GMT

ಮಂಗಳೂರು: ವಾಮಂಜೂರಿನಲ್ಲಿರುವ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಅಖ್ತರ್ ಅಹ್ಸನ್ ಸಈದ್ ಅವರು ಪ್ರಸ್ತುತ ವರ್ಷದ "ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್‌" ಪಡೆದುಕೊಂಡಿದ್ದಾರೆ.

ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಮಂಗಳೂರು ಬಿಷಪ್ ಫಾದರ್ ಡಾ. ಪೀಟರ್ ಪೌಲ್ ಸಲ್ದಾನ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಅಖ್ತರ್ ಅಹ್ಸನ್ ಸಈದ್ ಅವರು ಜೆಪ್ಪು ನಿವಾಸಿ ಅಮೀನ್ ಅಹ್ಸನ್ ಮತ್ತು ಶಮೀರಾ ಜಹಾನ್ ದಂಪತಿಯ ದ್ವಿತೀಯ ಪುತ್ರ. ಇವರ ಮೊದಲ ಪುತ್ರ ಅಮ್ಮಾರ್ ಅಹ್ಸನ್ ಸಈದ್ ಅವರು ಮಹೇಶ್ ಡಿಗ್ರಿ ಕಾಲೇಜಿನ ಬಿ.ಕಾಮ್ ವಿಭಾಗದಲ್ಲಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್‌ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News