ಪಂಜಾಬ್: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ‌

Update: 2022-05-22 18:27 GMT

ಚಂಡಿಗಢ, ಮೇ 22: ಪಂಜಾಬ್ನ ಹೋಶಿಯಾರ್ಪುರದ ಗದ್ರಿವಾಲಾ ಗ್ರಾಮದಲ್ಲಿ 300 ಅಡಿ ಆಳದ ಕೊಳವೆ ಬಾವಿಗೆ ರವಿವಾರ 6 ವರ್ಷದ ಬಾಲಕನೋರ್ವ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬಾಲಕನ ರಕ್ಷಣಾ ಕಾರ್ಯಾಚರಣೆಗೆ ಸೇನೆಗೆ ಕರೆ ನೀಡಲಾಗಿದೆ. ಕೊಳವೆ ಬಾವಿ ಸಮೀಪ ಸುರಂಗ ತೋಡಲು ಜೆಸಿಬಿಯ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ಜೆಸಿಬಿ ಯಂತ್ರ ಒಂದೂವರೆ ಗಂಟೆಯಲ್ಲಿ ಕೇವಲ 15 ಅಡಿ ಮಾತ್ರ ಅಗೆಯುವ ಸಾಮರ್ಥ್ಯ ಹೊಂದಿದೆ. ಬಾಲಕ ಕೊಳವೆ ಬಾವಿಯ 95 ಅಡಿ ಆಳದಲ್ಲಿ ಸಿಲುಕಿದ್ದಾನೆ ಎಂದು ಅದು ತಿಳಿಸಿದೆ. ಬಿಡಾಡಿ ನಾಯಿಯೊಂದರಿಂದ ರಕ್ಷಿಸಿಕೊಳ್ಳುವ ಸಂದರ್ಭ ಬಾಲಕ ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ. ಈ ಘಟನೆ ಬೆಳಗ್ಗೆ 9 ಗಂಟೆಗೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಬಾಲಕನಿಗೆ ಉಸಿರಾಟದ ಸಮಸ್ಯೆ ಉದ್ಭವಿಸದಂತೆ ಕೊಳವೆ ಬಾವಿಯೊಳಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News