ಬಂಟಕಲ್ಲಿನ ಚಿತ್ರಕಲಾವಿದೆ ಪ್ರಿಯಾಂಕ ದಾಖಲೆ
Update: 2022-05-24 19:51 IST
ಶಿರ್ವ : ಬಂಟಕಲ್ಲು ಸಮೀಪದ ಹೇರೂರಿನ ಯುವ ಕಲಾವಿದೆ ಪ್ರಿಯಾಂಕಾ ಆಚಾರ್ಯ ಸ್ಟ್ರಿಂಗ್ ಆರ್ಟ್ ಮೂಲಕ ರಚಿಸಿರುವ ವಿರಾಟ್ ವಿಶ್ವಕರ್ಮ ಕಲಾಕೃತಿ ರಚಿಸುವ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್‌ನಲ್ಲಿ ದಾಖಲೆ ಮಾಡಿದ್ದಾರೆ.
ಕಲಿಕೆಯ ಜೊತೆಗೆ ರಂಗೋಲಿ ಬಿಡಿಸುವುದು, ಚಿತ್ರಗಳ ರಚನೆ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಈಕೆ, ಇದೀಗ ತನ್ನ ಸ್ಟ್ರಿಂಗ್ ಆರ್ಟ್ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಬಿಸಿಎ ಪದವೀಧರೆಯಾಗಿದ್ದು, ಪ್ರಸ್ತುತ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.