×
Ad

ಪ್ರವೀಣ್ ನಾಯಕ್‌ಗೆ ಬೀಳ್ಕೊಡುಗೆ

Update: 2022-05-24 20:47 IST

ಉಡುಪಿ : ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾಗಿ ಏಳು ವರ್ಷಗಳ ಸೇವೆ ಸಲ್ಲಿಸಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಹುದ್ದೆಗೆ ವರ್ಗಾವಣೆಗೊಂಡ ಪ್ರವೀಣ್ ಬಿ. ನಾಯಕ್ ಅವರನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಇದರೊಂದಿಗೆ ಉಡುಪಿ ಜಿಲ್ಲಾ ಸಹಕಾರ ಸಂಘಗಳ ನೂತನ ಉಪನಿಬಂಧಕ ರಾಗಿ ಅಧಿಕಾರ ಸ್ವೀಕರಿಸಿದ ಲಕ್ಷ್ಮೀನಾರಾಯಣ ಜೆ. ಎನ್. ಅವರನ್ನು ಸಹ ಜಗನ್ನಾಥ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳ ವಾರ ಸ್ವಾಗತಿಸಿ  ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಶಿವಾಜಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಯಶಪಾಲ್ ಎ. ಸುವರ್ಣ, ಹರೀಶ್ ಕಿಣಿ ಹಾಗೂ ಯೂನಿಯನ್‌ನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News