ಗುಜರಾತ್: ಮೆಕ್ಡೊನಾಲ್ಡ್ಸ್‌ ನ ಲಘು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆ

Update: 2022-05-25 17:53 GMT

ಗಾಂಧಿನಗರ, ಮೇ 25: ಅಹ್ಮದಾಬಾದ್ನಲ್ಲಿರುವ ಮೆಕ್ಡೊನಾಲ್ಡ್ ಮಳಿಗೆಯಲ್ಲಿ ಆದೇಶಿಸಲಾಗಿದ್ದ ಲಘು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ ಎಂದು ಅಹ್ಮದಾಬಾದ್ನ ವ್ಯಕ್ತಿಯೋರ್ವರು ಪ್ರತಿಪಾದಿಸಿದ್ದಾರೆ.

ಮೆಕ್ಡೊನಾಲ್ಡ್ ಮಳಿಗೆಯ ಒಳಗೆ ಸರಿಸುಮಾರು ಪೂರ್ಣ ಗ್ಲಾಸ್ ಲಘು ಪಾನೀಯದಲ್ಲಿ ಹಲ್ಲಿ ತೇಲುತ್ತಿರುವ ವೀಡಿಯೊವನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ವೈರಲ್ ಆದ ಬಳಿಕ ಅಹ್ಮದಾಬಾದ್ ನಗರ ಪಾಲಿಕೆ ಮೆಕ್ಡೊನಾಲ್ಡ್ ಮಳಿಗೆಯನ್ನು ಮುಚ್ಚಲು ಆದೇಶಿಸಿದೆ. ಮೆಕ್ಡೊನಾಲ್ಡ್ ಮಳಿಗೆಯಲ್ಲಿ ನಾಲ್ವರು ಗೆಳೆಯರು ಗುಂಪು ಶನಿವಾರ ಆಹಾರ ಸೇವಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಗ್ಲಾಸ್ ಅನ್ನು ಅಲುಗಾಡಿಸಿ ಎರಡು ಸಿಪ್ ಕುಡಿದ ಬಳಿಕ ಮೇಲಿನಿಂದ ಸತ್ತ ಹಲ್ಲಿ ಬಿತ್ತು ಎಂದು ಭಾರ್ಗವ ಜೋಶಿ ಟ್ವೀಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ. ನಾವು ನಾಲ್ಕು ಗಂಟೆಗಳ ಕಾಲ ಕಾದೆವು. ಆದರೆ, ಸಿಬ್ಬಂದಿ ಲಘು ಪಾನೀಯದ 300 ರೂಪಾಯಿಯನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದರು ಎಂದು ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಅವರ ಗೆಳೆಯರೊಬ್ಬರು ಪ್ರತಿಪಾದಿಸಿದ್ದಾರೆ. ಜೀವದ ಬೆಲೆ 300 ರೂಪಾಯಿಯೇ? ಎಂದು ಗುಂಪಿನಲ್ಲಿದ್ದ ಇನ್ನೋರ್ವ ವ್ಯಕ್ತಿ ಪ್ರಶ್ನಿಸಿದ್ದಾರೆ. ಟ್ವೀಟರ್ನಲ್ಲಿ ಈ ವೀಡಿಯೊ‌ ವೈರಲ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News