​ಜೂ.2: ನೇರ ಸಂದರ್ಶನ

Update: 2022-05-26 15:01 GMT

ಮಂಗಳೂರು : ಅಮೆಝಾನ್ ಕಂಪನಿಯಲ್ಲಿ ತಿಂಗಳಿಗೆ 26 ಸಾವಿರ ವೇತನವುಳ್ಳ 70 ಡೆಲಿವರಿ ಬಾಯ್ ಹುದ್ದೆ ಗಳಿಗೆ ಜೂ.2ರಂದು ನಗರದ ಉರ್ವ ಮಾರುಕಟ್ಟೆಯ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿ ಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಯಾವುದೇ ವಿದ್ಯಾರ್ಹತೆಯುಳ್ಳ ಆಸಕ್ತ ಉದ್ಯೋಗಾಕಾಂಕ್ಷಿಗಳು ದ್ವಿಚಕ್ರ ವಾಹನ ಪರವಾನಿಗೆ, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮತ್ತಿತರ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು ಮಾಹಿತಿಗಾಗಿ ಕಚೇರಿ ದೂ.ಸಂ:೦೮೨೪-೨೪೫೩೨೨೨, ೯೧೧೦೨೪೮೪೮೫ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News