ತಾಂತ್ರಿಕ -ಸಾಂಸ್ಕೃತಿಕ ಹಬ್ಬ ‘ವರ್ಣೋತ್ಸವ’ ಉದ್ಘಾಟನೆ

Update: 2022-05-27 14:59 GMT

ಶಿರ್ವ : ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಕಾಲೇಜು ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ವರ್ಣೋತ್ಸವವನ್ನು  ಬೆಂಗಳೂರಿನ ಪ್ರತಿಷ್ಠಿತ ವರ್ಚುಸಾ ಕನ್ಸಲ್ಟೆಂಟಿಗ್ ಕಂಪೆನಿಯ ಹಿರಿಯ ಕನ್ಸಲ್ಟೆಂಟ್, ಕಾಲೇಜಿನ ಹಳೆಯ ವಿದ್ಯಾರ್ಥಿನಿ ದೇವಿಕಾ ಲಕ್ಷ್ಮೀಶ ಶುಕ್ರವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಮ್ಯು-ಸಿಗ್ಮ ಕಂಪೆನಿಯಲ್ಲಿ ಡಾಟಾ ಡಿಸಿಶನ್ ಸೈಂಟಿಸ್ಟ್, ಕಾಲೇಜಿನ ಹಳೆಯ ವಿದ್ಯಾರ್ಥಿನಿ ಸಮನ್ವಿತ ಭಾಗವತ್ ಮಾತನಾಡಿದರು. ಅಧ್ಯಕ್ಷತೆಯನ್ನು ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಕೃಷ್ಣ ವಿಜೇತರ ಪಟ್ಟಿಯನ್ನು ವಾಚಿಸಿದರು. ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ವಂದಿಸಿದರು. ರತ್ನಶ್ರೀ ಆಚಾರ್ಯ ಮತ್ತು ಅನನ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News