ಅಪಹರಣ ಪ್ರಕರಣ: ರುಬಯ್ಯ ಸಯೀದ್ ಗೆ ಸಿಬಿಐ ಸಮನ್ಸ್

Update: 2022-05-27 18:13 GMT

ಜಮ್ಮು, ಮೇ 27: ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಪುತ್ರಿ ರುಬಯ್ಯ ಸಯೀದ್ ಅವರನ್ನು 1989ರಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮುಂದೆ ಜುಲೈ 15ರಂದು ಹಾಜರಾಗುವಂತೆ ಇಲ್ಲಿನ ಸಿಬಿಐ ನ್ಯಾಯಾಲಯ ರುಬಯ್ಯಾ ಸಯೀದ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. 

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ರುಬಯ್ಯಾ ಸಯೀದ್ ಅವರಿಗೆ ಸಿಬಿಐ ನ್ಯಾಯಾಲಯ ಸಮನ್ಸ್ ನೀಡುತ್ತಿರುವುದು ಇದೇ ಮೊದಲು. ನಾಲ್ವರು ಉಗ್ರರನ್ನು ವಿನಿಮಯ ಮಾಡಿಕೊಂಡ ಬಳಿಕ ರುಬಯ್ಯ ಸಯೀದ್ ಅವರನ್ನು ಬಿಡುಗಡೆಗೊಳಿಸಲಾಗಿತ್ತು. 1990ರ ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಬಿಐ ರುಬಯ್ಯಿ ಸಯೀದ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿ ಎಂದು ಪರಿಗಣಿಸಿತ್ತು. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಿಷೇಧಿತ ಜೆಕೆಎಲ್ಎಫ್ನ ವರಿಷ್ಠ ಯಾಸಿನ್ ಮಲಿಕ್ ಅವರು ರುಬಯ್ಯೆ ಸಯೀದ್ ಅಪಹರಣ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News