ಕಾನ್ಸ್: ಶೌನಕ್ ಸೇನ್ ರ ‘ಆಲ್ ದಟ್ ಬ್ರೀದ್ಸ್’ ಸಾಕ್ಷಚಿತ್ರಕ್ಕೆ ‘ಗೋಲ್ಡನ್‌ ಐ’ಪ್ರಶಸ್ತಿ

Update: 2022-05-28 17:38 GMT

ಹೊಸದಿಲ್ಲಿ,ಮೇ 28: ದಿಲ್ಲಿಯ ಚಿತ್ರ ನಿರ್ಮಾಪಕ ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀದ್ಸ್’ ಸಾಕ್ಷಚಿತ್ರವು ಕಾನ್ಸ್ ಚಲನಚಿತೋತ್ಸವದಲ್ಲಿ ಲಿಒಯಿಲ್ ಡಿಓರ್ ಅಥವಾ ‘ಗೋಲ್ಡನ್ ಐ’ ಸರ್ವಶ್ರೇಷ್ಠ ಸಾಕ್ಷಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ‘ಆಲ್ ದಟ್ ಬ್ರೀದ್ಸ್’ 2022ರ ಸನ್ಡ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಅತ್ತುತ್ತಮ ಸಾಕ್ಷಚಿತ್ರಕ್ಕಾಗಿರುವ ‘ವರ್ಲ್ಡ್ ಸಿನೆಮಾ ಗ್ರಾಂಡ್ ಜ್ಯೂರಿ ಪ್ರೈಜ್’ ಅನ್ನು ಗೆದ್ದಿತ್ತು.

ದಿಲ್ಲಿಯ ವಝೀರಾಬಾದ್ ಗ್ರಾಮದ ತಮ್ಮ ಪಾಳು ಬಿದ್ದ ತಳ ಅಂತಸ್ತಿನಲ್ಲಿದ್ದುಕೊಂಡು ಗಾಯಗೊಂಡ ಪಕ್ಷಿಗಳನ್ನು,ವಿಶೇಷವಾಗಿ ಗಿಡುಗಗಳನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಮುಹಮ್ಮದ್ ಸೌದ್ ಮತ್ತು ನದೀಂ ಸೌದ್ ಎಂಬ ಸೋದರರ ಬದುಕು ಸೇನ್ ಅವರ ಸಾಕ್ಷಚಿತ್ರದ ವಸ್ತುವಾಗಿದೆ.

90 ನಿಮಿಷಗಳ ಅವಧಿಯ ‘ಆಲ್ ದಟ್ ಬ್ರೀದ್ಸ್’ 2016ರ ‘ಸಿಟೀಸ್ ಆಪ್ ಸ್ಲೀಪ್’ನ ಬಳಿಕ ಸೇನ್ ಅವರ ಎರಡನೇ ಸಾಕ್ಷಚಿತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News