×
Ad

ಪಾಕಿಸ್ತಾನದಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಿದ ಜಮ್ಮು-ಕಾಶ್ಮೀರದ ಪೊಲೀಸ್

Update: 2022-05-29 13:23 IST
Image Source : J&K POLICE (TWITTER).

ಶ್ರೀನಗರ: ಜಮ್ಮು ಹಾಗೂ  ಕಾಶ್ಮೀರ ಪೊಲೀಸರು ರವಿವಾರ ಮುಂಜಾನೆ ಹೀರಾನಗರ ವಲಯದ ಕಥುವಾ ಜಿಲ್ಲೆಯ ಹರಿಯಾ ಚಕ್ ಗ್ರಾಮದಲ್ಲಿ ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನು ಪರಿಶೀಲಿಸಲು ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ವಿವರಗಳನ್ನು ನೀಡಿದ ಪೊಲೀಸ್ ಮೂಲಗಳು,  ತಲ್ಲಿ ಹರಿಯ ಚಕ್‌ನಲ್ಲಿ ಡ್ರೋನ್ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಅನುಸರಿಸಿ ರಾಜ್‌ಬಾಗ್ ಪೊಲೀಸ್ ಠಾಣೆಯ ಪೊಲೀಸ್ ತಂಡವನ್ನು ಆ ಪ್ರದೇಶಕ್ಕೆ ನಿಯಮಿತವಾಗಿ ಕಳುಹಿಸಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರವಿವಾರ ಬೆಳಿಗ್ಗೆ ಪೋಲೀಸ್ ತಂಡವು ಪಾಕಿಸ್ತಾನದ ಕಡೆಯಿಂದ ಬರುತ್ತಿರುವ ಪೇಲೋಡ್ ಹೊಂದಿರುವ ಡ್ರೋನ್ ಅನ್ನು ಗಮನಿಸಿತು ಹಾಗೂ  ಗುಂಡಿನ ದಾಳಿ ನಡೆಸಿ ಅದನ್ನು ಉರುಳಿಸಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News