ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿದ ನಿತೀಶ್ ಕುಮಾರ್

Update: 2022-05-30 17:47 GMT

ಪಾಟ್ನಾ, ಮೇ 30: ಬಿಹಾರ್ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಅವರಿಗೆ ರಾಜ್ಯಸಭೆಯ ಇನ್ನೊಂದು ಅವಧಿಗೆ ಟಿಕೆಟ್ ನಿರಾಕರಿಸಿದ್ದಾರೆ.

ಅದರ ಬದಲು ಪಕ್ಷದ ತನ್ನ ಜಾರ್ಖಂಡ್ ಘಟಕದ ಅಧ್ಯಕ್ಷ ಖೀರು ಮಹ್ತೋ ಅವರನ್ನು ಆ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಜೆಡಿಯು ಶಾಸಕರು ಮೇಲ್ಮನೆಯ ನಾಮನಿರ್ದೇಶನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿತೀಶ್ ಕುಮಾರ್ ಅವರಿಗೆ ಅಧಿಕಾರ ನೀಡಿದ್ದರು. 

ಬಿಜೆಪಿಯು ಅವರನ್ನು ಸಚಿವಸ್ಥಾನದಲ್ಲಿ ಉಳಿಸಿಕೊಳ್ಳಲು ಹಾಗೂ ತನ್ನ ಕೋಟಾದಿಂದ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಲು ನಿರ್ಧರಿಸದೇ ಇದ್ದರೆ ಕೇಂದ್ರ ಸಂಪುಟದಿಂದ ತನ್ನ ಪಕ್ಷದ ಏಕೈಕ ಸಚಿವರನ್ನು ನಿತೀಶ್ ಕುಮಾರ್ ಅವರು ಜಾತಿ ಜನಗಣತಿಗೆ ಕರೆದ ನಿಗದಿತ ಸರ್ವ ಪಕ್ಷಗಳ ಸಭೆಗೆ ಮೊದಲು ಕರೆಸಿಕೊಳ್ಳುವ ಸೂಜನೆಯನ್ನು ಜೆಡಿಯು ಈ ಮೂಲಕ ನೀಡಿದೆ.

ಸಿಂಗ್ ಅವರು ಮೋದಿ ಸಂಪುಟದಲ್ಲಿರುವ ಜೆಡಿಯು ಕೋಟಾದ ಏಕೈಕ ಸಚಿವ. ಆರ್ಸಿಪಿ ಸಿಂಗ್ ಅವರನ್ನು ಪದಚ್ಯುತಿಗೊಳಿಸುವ ನಿರ್ಧಾರ ಜೆಡಿಯು ನಾಯಕರ ನಡುವಿನ ಆಂತರಿಕ ಕಲಹವನ್ನು ಸೂಚಿಸುತ್ತದೆ. ಸಿಂಗ್ ಅವರು ಒಂದು ಕಾಲದಲ್ಲಿ ಕುಮಾರ್ ಅವರಿಗೆ ಆಪ್ತರಾಗಿದ್ದರು. 

ಸಿಂಗ್ ಎರಡು ದಿನಗಳ ಹಿಂದೆ ಕುಮಾರ್ ಅವರನ್ನು ಭೇಟಿಯಾಗಲು ಹೋಗಿದ್ದರು. ಆಗ ಇಬ್ಬರು ನಾಯಕರು ಒಟ್ಟಿಗೆ ಕುಳಿತುಕೊಂಡಾಗಲೂ ಸರಿಯಾಗಿ ಮಾತನಾಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಸಿಂಗ್ ಅವರು ದಿಲ್ಲಿಯಲ್ಲಿದ್ದು, ಬಿಜೆಪಿ ನಾಯಕರಾದ ಭೂಪಿಂದರ್ ಯಾದವ್ ಹಾಗೂ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿದ್ದರು. ಒಂದು ವೇಳೆ ಸಿಂಗ್ ಅವರು ಜೆಡಿಯುನಿಂದ ನಾಮನಿರ್ದೇಶನಗೊಳ್ಳದೇ ಇದ್ದರೆ, ಬಿಜೆಪಿ ತನ್ನ ಕೋಟಾದಿಂದ ಅವಕಾಶ ಕಲ್ಪಿಸಬಹುದು ಎಂಬ ವಂದತಿ ಹರಡಿತ್ತು. ಆದರೆ, ಅದು ಸಂಭವಿಸಿಲ್ಲ. 

ಈ ಹೊಸ ಬೆಳವಣಿಗೆ ಬಿಜೆಪಿ-ಜೆಡಿಯು ನಡುವೆ ಬಿಕ್ಕಟ್ಟಿನ ಸುಳಿವನ್ನು ಕೂಡ ನೀಡಿದೆ. ಆದರೂ ಎರಡೂ ಪಕ್ಷಗಳ ನಾಯಕರು ಸರಕಾರ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದೆ ಹಾಗೂ ತಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಮಾಜಿ ಅಧಿಕಾರಿಯಾಗಿರುವ ಆರ್ಸಿಪಿ ಸಿಂಗ್ ಅವರನ್ನು ಎರಡು ಬಾರಿ ರಾಜ್ಯ ಸಭೆಗೆ ಕಳುಹಿಸಲಾಗಿದೆ. ಅಲ್ಲದೆ, ಪಕ್ಷದ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಪ್ರಸ್ತುತ ಅವರು ಕೇಂದ್ರ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News