52 ಕೋಟಿ ವಂಚನೆ: ಮಹರಾಷ್ಟ್ರ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು
Update: 2022-06-01 16:35 IST
ಮುಂಬೈ, ಜೂ. 1: ಮುಂಬೈ ನಗರ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಮೋಹಿತ್ ಕಾಂಬೋಜ್, ಕಂಪೆನಿಯೊಂದರ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕೊಂದರ ವಿರುದ್ಧ ಮುಂಬೈ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಕಾಂಬೋಜ್ ಮತ್ತು ಕಂಪೆನಿಯೊಂದರ ಕೆಲವು ಅಧಿಕಾರಿಗಳು 52 ಕೋಟಿ ರೂಪಾಯಿ ಸಾಲ ಪಡೆದು ಅದನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ ಎಂಬುದಾಗಿ ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಮ್ಯಾನೇಜರ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಈ ದೂರಿನ ಆಧಾರದ ಮೇಲೆ ಇಲ್ಲಿನ ಎಮ್‌ಆರ್‌ಎ ಮಾರ್ಗ ಪೊಲೀಸರು ಮಂಗಳವಾರ ಮೊಕದ್ದಮೆ ದಾಖಲಿಸಿದ್ದಾರೆ.