ಮೂಸೆವಾಲಾ ಹತ್ಯೆ ಬಳಿಕ ವಿವಿಐಪಿ ಭದ್ರತೆಯನ್ನು ಮರುಸ್ಥಾಪಿಸಿದ ಪಂಜಾಬ್‌ ಸರ್ಕಾರ

Update: 2022-06-02 14:38 GMT

ಚಂಡಿಗಢ: ಗಾಯಕ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಕೊಂದ ಐದು ದಿನಗಳ ನಂತರ ಪಂಜಾಬ್ ಸರ್ಕಾರ ವಿವಿಐಪಿ ಭದ್ರತೆಯನ್ನು ಮರುಸ್ಥಾಪಿಸಿದೆ. ಜೂನ್ 7 ರಿಂದ 420 ಕ್ಕೂ ಹೆಚ್ಚು ವಿವಿಐಪಿಗಳಿಗೆ ಭದ್ರತೆಯನ್ನು ಪುನಃಸ್ಥಾಪಿಸಲಾಗುವುದು ಎಂದು ಎಎಪಿ ಸರ್ಕಾರ ಹೇಳಿದೆ. 

ವಿವಿಐಪಿ ಭದ್ರತೆಯನ್ನು ಕಡಿತಗೊಳಿಸುವ ಪಂಜಾಬ್ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಸಚಿವ ಒಪಿ ಸೋನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ನಡೆಸುತ್ತಿದ್ದು, ವಿಚಾರಣೆಯ ವೇಳೆ ಭಗವಂತ ಮಾನ್‌ ಅವರ ಸರ್ಕಾರವು ವಿವಿಐಪಿಗಳ ಭದ್ರತೆ ಮರುಸ್ಥಾಪಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದೆ. 
 
ಪಂಜಾಬ್ ಸರ್ಕಾರವು ಸಿಧು ಮೂಸ್ ವಾಲಾ ಹತ್ಯೆಯ ನಂತರ ವಿವಿಐಪಿಗಳ ಭದ್ರತೆಯನ್ನು ಕಡಿತಗೊಳಿಸಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದು, ಇದೀಗ ಭದ್ರತೆಯನ್ನು ಹಿಂದಿರುಗಿಸುವ ಮೂಲಕ ತನ್ನ ತಪ್ಪುಗಳನ್ನು ಸರಿ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.

 
ವಿವಿಐಪಿ ಭದ್ರತೆಯನ್ನು ಪುನಸ್ಥಾಪಿಸುವ ಕುರಿತು ಆಮ್ ಆದ್ಮಿ ಪಕ್ಷವು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ, ಪಂಜಾಬ್‌ನ ಎಎಪಿ ಸರ್ಕಾರ ಮತ್ತು ಅರವಿಂದ್ ಕೇಜ್ರಿವಾಲ್ ಯು-ಟರ್ನ್ ಹೊಡೆದಿದ್ದಾರೆ  ಎಂದು ಬಿಜೆಪಿ ಆರೋಪಿಸಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷ ಯು ಟರ್ನ್ ತೆಗೆದುಕೊಳ್ಳುತ್ತಲೇ ಇದೆ ಎಂದು ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News