ಆರ್‌ಆರ್‌ಆರ್‌ 'ಸಲಿಂಗಿ ಸಿನಿಮಾ' ಎಂದ ಪಾಶ್ಚಾತ್ಯರು, ರಾಮ್‌ಗೋಪಾಲ್‌ ವರ್ಮಾ: ಅಭಿಮಾನಿಗಳಿಂದ ತರಾಟೆ

Update: 2022-06-03 14:00 GMT

ಹೊಸದಿಲ್ಲಿ: ಇತ್ತೀಚೆಗೆ ತೆರೆಕಂಡು ಬಾಕ್ಸ್‌ ಆಫೀಸಿನಲ್ಲಿ ಭಾರೀ ಗಳಿಕೆ ಕಂಡ ರಾಜಮೌಳಿ ನಿರ್ದೇಶನದ ಪ್ಯಾನ್‌ ಇಂಡಿಯಾ ಚಿತ್ರ ʼಆರ್‌ಆರ್‌ಆರ್‌ʼ ಕುರಿತು ಪಾಶ್ಚಾತ್ಯ ಸಿನೆಮಾ ವೀಕ್ಷಕರು ನೀಡಿರುವ ಪ್ರತಿಕ್ರಿಯೆ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.

ಆರ್‌ಆರ್‌ಆರ್‌ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಅವರು ಗೆಳೆಯರಾಗಿ ಅಭಿನಯಿಸಿದ್ದು, ಇಬ್ಬರ ಬಾಂಧವ್ಯವನ್ನು ತೋರಿಸುವ ಹಲವು ದೃಶ್ಯಗಳು ಚಿತ್ರದಲ್ಲಿದೆ. ಇದೇ ದೃಶ್ಯಗಳನ್ನಿಟ್ಟುಕೊಂಡು ಹಲವು ಪಾಶ್ಚಾತ್ಯರು ʼಆರ್‌ಆರ್‌ಆರ್‌ʼ ಸಲಿಂಗಿ ಚಿತ್ರ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಖ್ಯಾತ ನರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಪ್ರತಿಕ್ರಿಯಿಸಿದ್ದು, ಪಾಶ್ಚಾತ್ಯರು ʼಆರ್‌ಆರ್‌ಆರ್‌ʼ ಚಿತ್ರವನ್ನು ಸಲಿಂಗಿ ಚಿತ್ರ ಎನ್ನುತ್ತಿದ್ದಾರೆ, I was rightʼ ಎಂದು ಟ್ವೀಟ್‌ ಮಾಡಿದ್ದಾರೆ.

ಆದರೆ, ಆರ್‌ಆರ್‌ಆರ್‌ ಚಿತ್ರ ಸಲಿಂಗಿ ಚಿತ್ರ ಎಂದು ಹೇಳಿದವರ ವಿರುದ್ಧ ಹಲವರು ಟೀಕಿಸಿದ್ದು, ಪುರುಷರ ನಡುವಿನ ಗೆಳತನವನ್ನು ಸಲಿಂಗ ಸಂಬಂಧ ಎಂದು ಕಾಣಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ನೋಡುವವರ ದೃಷ್ಟಿಕೋನಕ್ಕೆ ಸಂಬಂಧಿಸಿದೆ ಎಂದೂ ಹಲವರು ಹೇಳಿದ್ದಾರೆ.

ರಜತ್‌ ಎಂಬವರು ಪ್ರತಿಕ್ರಿಯಿಸಿ, ʼಪಾಶ್ಚಾತ್ಯ ಜನರಿಗೆ ಸ್ನೇಹ ಅಥವಾ ಗೆಳೆತನ ಏನೆಂದು ಗೊತ್ತಿಲ್ಲ, ಅವರು ಆರ್‌ಆರ್‌ಆರ್‌ ಅನ್ನು ಸಲಿಂಗ ಪ್ರೇಮ ಎಂದು ಪರಿಗಣಿಸಿದ್ದಾರೆʼ ಎಂದು ಟ್ವೀಟ್‌ ಮಾಡಿದ್ದಾರೆ.

“ನೀವು ಅಂದುಕೊಂಡಂತೆ (ಆರ್‌ಆರ್‌ಆರ್) ಸಲಿಂಗಕಾಮಿ ಪ್ರಣಯವಲ್ಲ. ಭೀಮನು ರಾಮನನ್ನು ಅಣ್ಣ/ಭಾಯ್ ಎಂದು ಕರೆಯುತ್ತಾನೆ.” ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್‌ದಾರೆ.

“ನಿಜ! ವ್ಯಕ್ತಿಗಳ ಗ್ರಹಿಕೆ ಅವರ ಸಂಸ್ಕೃತಿ, ಸುತ್ತಮುತ್ತಲ ವಾತಾವರಣ, ವೈಯಕ್ತಿಕ ನಡವಳಿಕೆಯ ಮಾದರಿಗಳು ಮತ್ತು ಅಭಿಪ್ರಾಯಗಳು ಇತ್ಯಾದಿಗಳ ಮೇಲೆ ಅವಲಂಬಿತವಾಗಿದೆ. ಆದರೆ ಭಾರತದಲ್ಲಿ ಅಥವಾ ಚೀನಾದಲ್ಲಿ  ಸಂಸ್ಕೃತಿ ತುಂಬಾ ಪ್ರಬಲವಾಗಿದೆ ... ಅವರು ನಿದ್ರೆಯಲ್ಲೂ ಹಾಗೆ ಯೋಚಿಸುವುದಿಲ್ಲ! ಭಾರತದಲ್ಲಿ 99.9% ಜನರು ಹಾಗೆ ಯೋಚಿಸುವುದಿಲ್ಲ!” ಎಂದು ಹರಿಪ್ರಸಾದ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News