×
Ad

ಬಿಜೆಪಿ ವಕ್ತಾರೆಯಿಂದ ಪ್ರವಾದಿ ನಿಂದನೆ ಪ್ರಕರಣ: ವಿಶ್ವದಾದ್ಯಂತ ವ್ಯಾಪಕ ಖಂಡನೆ

Update: 2022-06-05 16:09 IST
Photo: Twitter

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಎಂಬಾಕೆ ಪ್ರವಾದಿ ಮುಹಮ್ಮದ್‌(ಸ) ರ ಕುರಿತು ಅಪಮಾನಕರ ಮಾತುಗಳನ್ನಾಡಿದ ಪ್ರಕರಣದ ಕುರಿತು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ಈ ಬಗ್ಗೆ ಪ್ರಕರಣಗಳನ್ನೂ ದಾಖಲಿಸಲಾಗಿತ್ತು. ಇದೀಗ ಈ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದೆ. ಪ್ರವಾದಿ ನಿಂದನೆಯನ್ನು ವಿರೋಧಿಸಿ ವಿಶ್ವದಾದ್ಯಂತ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ ನಲ್ಲಿ #إلا_رسول_الله_يا_مودي ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ. 

ವಿಶ್ವದಾದ್ಯಂತ ಹಲವಾರು ಪ್ರಮುಖ ಮಾಧ್ಯಮಗಳು ಹಾಗೂ ಹಲವಾರು ಪ್ರಮುಖ ವ್ಯಕ್ತಿಗಳು ಹೇಳಿಕೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ವಕ್ತಾರೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದೊಂದಿಗೆ ಗಲ್ಫ್‌ ರಾಷ್ಟ್ರಗಳು ಸಂಬಂಧ ಕಡಿದುಕೊಳ್ಳಬೇಕು ಹಾಗೂ ಭಾರತೀಯ ವಸ್ತುಗಳನ್ನು ಬಹಿಷ್ಕರಿಸಬೇಕಾಗಿಯೂ ಹಲವರು ಪೋಸ್ಟ್‌ ಗಳನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಮಿತಿಯನ್ನು ಮೀರುತ್ತಿದ್ದು, ದೇಶದಲ್ಲಿ ಅಲ್ಪಸಂಖ್ಯಾತರ ಶೋಷಣೆ ಹೆಚ್ಚಾಗುತ್ತಿದೆ ಎಂಬುವುದನ್ನು ಹಲವರು ಬೆಟ್ಟು ಮಾಡಿದ್ದಾರೆ. ಈಗಾಗಲೇ ಹಲವಾರು ಸೂಪರ್‌ ಮಾರ್ಕೆಟ್‌ ಗಳು ಭಾರತೀಯ ವಸ್ತುಗಳನ್ನು ತೆಗೆದುಹಾಕಿದೆ ಎಂದೂ ವರದಿಯಾಗಿದೆ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಬಿಜೆಪಿ ಪಕ್ಷವು ಸ್ಪಷ್ಟನೆ ನೀಡಿದೆ. ಯಾವುದೇ ಧಾರ್ಮಿಕ ವ್ಯಕ್ತಿಗಳ ನಿಂದನೆ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ" ಎಂದೂ ಹೇಳಿಕೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News