ನಾನು ಎಂದಿಗೂ ವಕಾರ್ ಯೂನಿಸ್ ರನ್ನು ಫಾಲೋ ಮಾಡಿಲ್ಲ: ಉಮ್ರಾನ್ ಮಲಿಕ್

Update: 2022-06-06 15:10 GMT
Photo:PTI

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್  2022 ರ ಸಮಯದಲ್ಲಿ ಉಮ್ರಾನ್ ಮಲಿಕ್ ಎಲ್ಲರ ಚಿತ್ತವನ್ನು ತಮ್ಮತ್ತ  ಸೆಳೆದರು. ಗುಜರಾತ್ ಟೈಟಾನ್ಸ್ ವಿರುದ್ಧದ 5 ವಿಕೆಟ್ ಗೊಂಚಲು ಸೇರಿದಂತೆ 14 ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ  22 ವಿಕೆಟ್‌ಗಳನ್ನು ಪಡೆದಿದ್ದರು. ಜಮ್ಮುವಿನ ವೇಗದ ಬೌಲರ್ ಗಂಟೆಗೆ  150 ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಿರವಾಗಿ ಬೌಲ್ ಮಾಡಿದರು.ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಮಲಿಕ್  ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ವಾರ  ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರು ಉಮ್ರಾನ್ ಅವರು  ವಕಾರ್ ಯೂನಿಸ್ ಅವರನ್ನು ಸ್ವಲ್ಪಮಟ್ಟಿಗೆ  ನೆನಪಿಸುತ್ತಾರೆ ಎಂದು ಹೇಳಿದ್ದರು.

ಆದಾಗ್ಯೂ, ಉಮ್ರಾನ್ ಅವರು ಪಾಕಿಸ್ತಾನದ ಮಾಜಿ ವೇಗಿಯನ್ನು ಎಂದಿಗೂ ಅನುಸರಿಸಿಲ್ಲ ಎಂದು ಹೇಳಿದ್ದಾರೆ. ತನ್ನ ಬೌಲಿಂಗ್ ಐಡಲ್ ಗಳಾದ  ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಹೈದರಾಬಾದ್  ತಂಡದ ಭುವನೇಶ್ವರ ಕುಮಾರ್ ಅವರನ್ನು ಫಾಲೋ ಮಾಡುತ್ತಿರುವುದಾಗಿ ಹೇಳಿದರು.

“ನಾನು ವಕಾರ್ ಯೂನಿಸ್ ಅವರನ್ನು ಅನುಸರಿಸಿಲ್ಲ. ನನ್ನದು ಸಹಜ ಬೌಲಿಂಗ್ ಶೈಲಿ. ನನ್ನ ಆದರ್ಶ ಬೌಲರ್ ಗಳ ಪಟ್ಟಿಯಲ್ಲಿ  (ಜಸ್ಪ್ರೀತ್) ಬುಮ್ರಾ, (ಮುಹಮ್ಮದ್) ಶಮಿ ಹಾಗೂ  ಭುವನೇಶ್ವರ್ (ಕುಮಾರ್) ಭಾಯಿ ಸೇರಿದ್ದಾರೆ. ನಾನು ಕ್ರಿಕೆಟ್ ಆಡುವಾಗ ಅವರನ್ನು ಅನುಸರಿಸುತ್ತಿದ್ದೆ ”ಎಂದು ಉಮ್ರಾನ್ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ತಿಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ ಐದು ಟಿ-20 ಪಂದ್ಯಗಳಲ್ಲಿ ಭಾರತಕ್ಕೆ ಗೆಲ್ಲಲು ಸಹಾಯ ಮಾಡುವುದು ನನ್ನ ಗುರಿಯಾಗಿದೆ ಎಂದು ವೇಗಿ ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News