ʼನೋಟುಗಳಲ್ಲಿ ಗಾಂಧಿ ಚಿತ್ರ ತೆರವುʼ ಸುದ್ದಿಯ ಕುರಿತು ರಿಸರ್ವ್‌ ಬ್ಯಾಂಕ್‌ ಹೇಳಿದ್ದೇನು?

Update: 2022-06-06 09:59 GMT

ಹೊಸದಿಲ್ಲಿ: ಕೆಲವು ದಿನಗಳಿಂದ ಭಾರತದಲ್ಲಿ ಸದ್ಯ ಚಲಾವಣೆಯಾಗುತ್ತಿರುವ ನೋಟುಗಳ ಸ್ವರೂಪವನ್ನು ಬದಲಿಸುವ ಕುರಿತಾದ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗರ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪಷ್ಟನೆ ನೀಡಿದೆ. "ಅಂತಹಾ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ" ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದ್ದಾಗಿ ANI ವರದಿ ಮಾಡಿದೆ.

ಮಹಾತ್ಮಾ ಗಾಂಧಿಯ ಮುಖದ ಬದಲು ಇನ್ನಿತರ ವ್ಯಕ್ತಿಗಳ ಮುಖವನ್ನು ನೋಟುಗಳಲ್ಲಿ ಬಳಸುವ ಕುರಿತ ಸುದ್ದಿಗೆ ಪ್ರತಿಕ್ರಿಯಿಸಿದ ರಿಸರ್ವ್‌ ಬ್ಯಾಂಕ್‌, "ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ಬ್ಯಾಂಕ್ ನೋಟುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News