ಬೆಳ್ತಂಗಡಿ : ಗ್ರಾಮ ಸಹಾಯಕ ಹೃದಯಘಾತದಿಂದ ನಿಧನ
Update: 2022-06-07 16:58 IST
ಬೆಳ್ತಂಗಡಿ : ಮೇಲಂತಬೆಟ್ಟು, ಸವಣಾಲು, ಮುಂಡೂರು ಗ್ರಾಮ ಸಹಾಯನಾಗಿದ್ದ ಸುಂದರ ಗೌಡ (44) ಕರ್ತವ್ಯದ ವೇಳೆ ಕಚೇರಿಯಲ್ಲಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಗ್ರಾಮ ಸಹಾಯಕ ಸುಂದರ ಗೌಡ ಮತ್ತು ಗ್ರಾಮಲೆಕ್ಕಿಗ ಶಿವಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಗ್ರಾಮಲೆಕ್ಕಿಗ ಶಿವಕುಮಾರ್ ಅವರು ಮೇಲಂಬೆಟ್ಟು ಗ್ರಾಮ ಪಂಚಾಯತ್ ಗೆ ಹೋಗಿ ವಾಪಸ್ ಬಂದಾಗ ಸುಂದರ ಗೌಡ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಹೊರಗಡೆ ಇದ್ದ ಮುಂಡೂರು ಗ್ರಾಮದ ಸದಸ್ಯರಾದ ಸಂತೋಷ್ ಅವರು ಬಂದು ತನ್ನ ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಈ ವೇಳೆ ಸುಂದರ ಗೌಡ ನಿಧನರಾಗಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.