ಇರಾನ್‌ ಸಚಿವರು ಪ್ರವಾದಿ ನಿಂದನೆ ವಿಚಾರವನ್ನು ಪ್ರಸ್ತಾಪಿಸಿಲ್ಲ: ಇರಾನ್‌ ಹೇಳಿಕೆಯನ್ನು ನಿರಾಕರಿಸಿದ ಭಾರತ ಸರ್ಕಾರ

Update: 2022-06-09 15:31 GMT
Photo: twitter/narendramodi

ಹೊಸದಿಲ್ಲಿ,ಜೂ.9: ಪ್ರವಾದಿ ಮುಹಮ್ಮದರ ವಿರುದ್ಧ ಬಿಜೆಪಿಯ ಇಬ್ಬರು ಮುಖಂಡರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ವಿಷಯವು ಇರಾನ್ ನ ವಿದೇಶಾಂಗ ಸಚಿವರ ಜೊತೆ ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಮಾತುಕತೆಯ ವೇಳೆ ಚರ್ಚಿಸಲಾಯಿತೆಂಬ ವರದಿಗಳನ್ನು ಭಾರತವು ತಳ್ಳಿಹಾಕಿದೆ.

 ಬಿಜೆಪಿ ಅಮಾನತುಗೊಂಡ ನಾಯಕಿ ನೂಪುರ್ ಶರ್ಮಾ ಹಾಗೂ ಉಚ್ಚಾಟಿತ ನಾಯಕ ನವೀನ್ ಜಿಂದಾಲ್ ಅವರ ಹೇಳಿಕೆಗಳು ಸರಕಾರದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
      
ಭಾರತ ಪ್ರವಾಸದಲ್ಲಿರುವ ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಆಮಿರ್ ಅಬ್ದೊಲ್ಲಾಹಿಯಾನ್ ಅವರು ಬುಧವಾರ ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್ಎಸ್ಎ)ಯ ಅಧಿಕಾರಿ ಅಜಿತ್ ಧೋವಲ್  ಜೊತೆ ಬುಧವಾರ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಪ್ರವಾದಿಯವರ ಕುರಿತಾದ ವಿವಾದಾತ್ಮಕ ಹೇಳಿಕೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಧೋವಲ್ ಅವರು ತಪ್ಪು ಎಸಗಿದವರ ವಿರುದ್ಧ ಇತರರು ಕೂಡಾ ಪಾಠ ಕಲಿಯುವಂತೆ ಮಾಡುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿರುವುದಾಗಿ ಇರಾನ್ ನ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News