×
Ad

ಮೊದಲ ಟ್ವೆಂಟಿ-20: ದಕ್ಷಿಣ ಆಫ್ರಿಕಾ ಗೆಲುವಿಗೆ 212 ರನ್ ಗುರಿ ನೀಡಿದ ಭಾರತ

Update: 2022-06-09 20:44 IST
Photo:twitter

ಹೊಸದಿಲ್ಲಿ, ಜೂ.9: ಆರಂಭಿಕ ಬ್ಯಾಟರ್ ಇಶಾನ್ ಕಿಶನ್ (76 ರನ್, 48 ಎಸೆತ, 11 ಬೌಂಡರಿ, 3 ಸಿಕ್ಸರ್)ನೇತೃತ್ವದಲ್ಲಿ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ಗೆಲುವಿಗೆ 212 ರನ್ ಗುರಿ ನೀಡಿತು.

 ಗುರುವಾರ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ರಿಷಭ್ ಪಂತ್ ಬಳಗ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಇದರೊಂದಿಗೆ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದೆ. ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತವು ಗರಿಷ್ಠ ಮೊತ್ತ ಕಲೆ ಹಾಕಿದೆ.

ಋತುರಾಜ್ ಗಾಯಕ್ವಾಡ್(23 ರನ್, 15 ಎಸೆತ)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕಿಶನ್ 6.2 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಗಾಯಕ್ವಾಡ್ ಔಟಾದ ಬಳಿಕ ಶ್ರೇಯಸ್ ಅಯ್ಯರ್(36 ರನ್, 27 ಎಸೆತ)ಅವರೊಂದಿಗೆ ಕೈಜೋಡಿಸಿದ ಕಿಶನ್ 2ನೇ ವಿಕೆಟ್‌ಗೆ 80 ರನ್ ಸೇರಿಸಿದರು.

ಹಾರ್ದಿಕ್ ಪಾಂಡ್ಯ (ಔಟಾಗದೆ 31, 12 ಎಸೆತ, 2 ಬೌಂಡರಿ,3 ಸಿಕ್ಸರ್)ಹಾಗೂ ರಿಷಭ್ ಪಂತ್(29 ರನ್, 16 ಎಸೆತ, 2 ಬೌಂ., 2 ಸಿ,) 4ನೇ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದರು.

ದಕ್ಷಿಣ ಆಫ್ರಿಕಾದ ಪರ ಪ್ರಿಟೋರಿಯಸ್(1-35), ನೊರ್ಟ್ಜೆ(1-36) ಪಾರ್ನೆಲ್(1-32) ಹಾಗೂ ಕೇಶವ ಮಹಾರಾಜ್(1-43)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News