×
Ad

ನಾಗಪುರದ ಕರಾಟೆ ತರಬೇತುದಾರನ ವಿರುದ್ಧ ಮತ್ತೆ ಐವರು ಬಾಲಕಿಯರಿಂದ ಕಿರುಕುಳದ ಆರೋಪ

Update: 2022-06-09 23:29 IST

ನಾಗಪುರ, ಜೂ. 9: ಹನ್ನೊಂದು ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಕರಾಟೆ ತರಬೇತುದಾರನನ್ನು ಬಂಧಿಸಿದ ಬಳಿಕ, ನಾಗಪುರದಲ್ಲಿ ಮತ್ತೆ ಐವರು ಬಾಲಕಿಯರು ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 

ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಗೋಪಾಲ ರಾಮೇಶ್ವರ ಗೊಂಡಾನೆ (40)ಯ ವಿರುದ್ಧ ಕನ್ಹಾನ್ ಪೊಲೀಸರು ಬುಧವಾರ ಐದು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ‘‘ಗೊಂಡಾನೆ ಕಳೆದ ಆರು ತಿಂಗಳಿಂದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಭಾರತೀಯ ಸೇನೆಗೆ ಆಯ್ಕೆಯಾಗಲು ಕೌಶಲಗಳನ್ನು ಕಲಿಸುವ ನೆಪದಲ್ಲಿ ಆತ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ’’ ಎಂದು ಪೊಲೀಸ್ ಅಧೀಕ್ಷಕ (ಎಸ್ಪಿ) ವಿಜಯ್ ಮಗರ್ ಹೇಳಿದ್ದಾರೆ. 

ಆರೋಪಿ ತರಬೇತಿಗೆಂದು ವಿದ್ಯಾರ್ಥಿಗಳನ್ನು ಅವರ ಮನೆಯಿಂದಲೇ ಕರೆದೊಯ್ಯುತ್ತಿದ್ದ. ಈ ರೀತಿ ಆತ ವಿದ್ಯಾರ್ಥಿನಿಯರ ಹೆತ್ತವರ ವಿಶ್ವಾಸ ಗಳಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ. ಕಿರುಕುಳಕ್ಕೊಳಗಾದವರು ಕನ್ಹಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಮಗರ್ ಜನರಲ್ಲಿ ವಿನಂತಿಸಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ ನೆರವು ಒದಗಿಸುವ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News