ಹೌರಾ ಹಿಂಸಾಚಾರದ ಹಿಂದೆ ಕೆಲವು ರಾಜಕೀಯ ಪಕ್ಷಗಳಿವೆ: ಮಮತಾ ಬ್ಯಾನರ್ಜಿ

Update: 2022-06-11 08:08 GMT
Photo:PTI

ಕೋಲ್ಕತಾ: ಹೌರಾ ಜಿಲ್ಲೆಯ  ಪಂಚ್ಲಾ ಬಝಾರ್‌ನಲ್ಲಿ  ಶನಿವಾರದಂದು ಪೊಲೀಸರು ಹಾಗೂ  ಪ್ರತಿಭಟನಾಕಾರರ ನಡುವೆ ಮತ್ತೆ ಘರ್ಷಣೆ ಸಂಭವಿಸಿದ್ದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದರು ಹಾಗೂ  ಹಿಂಸಾಚಾರದ ಹಿಂದೆ ಕೆಲವು ರಾಜಕೀಯ ಪಕ್ಷಗಳು ಇವೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಮಮತಾ ಬ್ಯಾನರ್ಜಿ, "ನಾನು ಈ ಹಿಂದೆಯೂ ಹೇಳಿದ್ದೇನೆ... ಕಳೆದ ಎರಡು ದಿನಗಳಿಂದ ಹೌರಾದಲ್ಲಿ ಹಿಂಸಾತ್ಮಕ ಘಟನೆಗಳಿಂದ ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ರಾಜಕೀಯ ಪಕ್ಷಗಳು ಇದರ ಹಿಂದೆ ಇವೆ ಹಾಗೂ  ಅವರು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಗಲಭೆಯನ್ನು ಸಹಿಸುವುದಿಲ್ಲ ಹಾಗೂ  ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಬಿಜೆಪಿ ಪಾಪಗಳನ್ನು ಮಾಡುತ್ತದೆ ಹಾಗೂ  ಜನರು ತೊಂದರೆ ಅನುಭವಿಸುತ್ತಾರೆ ಎಂದು ಟ್ವೀಟಿಸಿದರು.

ಉಲುಬೆರಿಯಾ ಉಪವಿಭಾಗದಲ್ಲಿ ವಿಧಿಸಲಾಗಿದ್ದ ಸಿಆರ್ ಪಿಸಿ ಯ ಸೆಕ್ಷನ್ 144 ಅನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ.

ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹೌರಾ ಪೊಲೀಸರು ನಿನ್ನೆ ರಾತ್ರಿಯಿಂದ 70 ಜನರನ್ನು ಬಂಧಿಸಿದ್ದಾರೆ.

ಬಿಜೆಪಿ ವಕ್ತಾರೆ  ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸುವ ಪೋಸ್ಟರ್‌ಗಳೊಂದಿಗೆ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಕೋಲ್ಕತ್ತಾದಲ್ಲಿ,ನೂರಾರು ಜನರು ಜಮಾಯಿಸಿದ್ದರು.

 ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಹಾಗೂ  ನವೀನ್ ಜಿಂದಾಲ್  ಅವರ ಪ್ರವಾದಿ ನಿಂದನೆಯನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಹಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಗುರುವಾರ ರಸ್ತೆ ತಡೆ ನಡೆಸುವುದರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News