×
Ad

ದಿಲ್ಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅಶೋಕ್ ಗೆಹ್ಲೋಟ್, ಸುರ್ಜೇವಾಲಾ ಸಹಿತ ಹಿರಿಯ ನಾಯಕರು ಪೊಲೀಸ್ ವಶಕ್ಕೆ

Update: 2022-06-13 14:58 IST
Photo:twitter

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಏಜೆನ್ಸಿ ಈಡಿ  ಮುಂದೆ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಜರಾಗುವ ಮುನ್ನ ಸೋಮವಾರ ಅಕ್ಬರ್ ರಸ್ತೆಯಿಂದ ದಿಲ್ಲಿಯ ಜಾರಿ ನಿರ್ದೇಶನಾಲಯ (ಈಡಿ) ಕಚೇರಿಗೆ ಮೆರವಣಿಗೆ ನಡೆಸಿದ ನಂತರ ಹಲವಾರು ಹಿರಿಯ ಕಾಂಗ್ರೆಸ್ ನಾಯಕರನ್ನು ಪೊಲೀಸ್ ಬಸ್‌ಗಳಲ್ಲಿ ಕರೆದೊಯ್ಯಲಾಯಿತು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಮುಖಂಡರಾದ ಹರೀಶ್ ರಾವತ್ ಹಾಗೂ ಜೈರಾಮ್ ರಮೇಶ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ .ಸಿ. ವೇಣುಗೋಪಾಲ್ ಅವರನ್ನು ಕರೆದೊಯ್ಯಲಾಯಿತು.

ಈಡಿ ಕಚೇರಿ ಬಳಿ ಪ್ರತಿಭಟನಾಕಾರರೊಂದಿಗಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಅವರು ನಂತರ ಕಾರಿನಲ್ಲಿ ಹೊರಟರು. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಕಚೇರಿಯ ಬಳಿಯ ಬ್ಯಾರಿಕೇಡ್‌ಗಳ ಸಮೀಪ ತೆರಳಿದ್ದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸೋಮವಾರ ಈಡಿ ಮುಂದೆ ಹಾಜರಾಗಿದ್ದರು. ಎಐಸಿಸಿ ಪ್ರಧಾನ ಕಚೇರಿಯಿಂದ ಈಡಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳ ಶಾಸಕರು ಮತ್ತು ಸಂಸದರು ದಿಲ್ಲಿಯಲ್ಲಿ ಒಟ್ಟಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News