ಭಾರತದ ದೂರಸಂಪರ್ಕದಲ್ಲಿ ಹೊಸ ಶಕೆ ಆರಂಭ: 5ಜಿ ತರಂಗಗುಚ್ಛ ಹರಾಜು ಕುರಿತು ಸಚಿವರ ಹೇಳಿಕೆ

Update: 2022-06-15 16:22 GMT
photo: pti

ಹೊಸದಿಲ್ಲಿ, ಜೂ. 15: 5ಜಿ ಸೇವೆಗಳ ತರಂಗ ಗುಚ್ಛ (ಸ್ಪ್ರೆಕ್ಟ್ರಂ)ಹರಾಜು ಭಾರತದ ದೂರಸಂಪರ್ಕದಲ್ಲಿ ಹೊಸ ಶಕೆಯೊಂದನ್ನು ಆರಂಭಿಸಲಿದೆ ಎಂದು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟ  ೫ಜಿ ತರಂಗ ಗುಚ್ಛ  ಹರಾಜು ನಡೆಸುವ ವಿಧಾನವನ್ನು ಅನುಮೋದಿಸಿರುವುದರಿಂದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಜುಲೈ ಅಂತ್ಯದ ಒಳಗೆ ರೇಡಿಯೋ ಅಲೆಯ 72 ಜಿಎಚ್‌ಝಡ್ ಅನ್ನು ನಿರ್ಬಂಧಿಸಲಾಗುತ್ತದೆ. ತರಂಗಗುಚ್ಛ ಹರಾಜು 2022 ಜುಲೈ 26 ರಂದು ನಡೆಯಲಿದೆ.

ಅಭಿವೃದ್ಧಿಗೆ ಅನುವು ಮಾಡಿ ಕೊಡಲು ಹಾಗೂ ಯಂತ್ರದಿಂದ ಯಂತ್ರಕ್ಕೆ ಸಂವಹನ, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ), ಅಟೋಮೋಟಿವ್, ಆರೋಗ್ಯ ಸೇವೆ, ಕೃಷಿ, ಇಂಧನ ಹಾಗೂ ಇತರ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ)  ಸಂಶೋಧನೆಯ ಅಲೆ ಉತ್ತೇಜಿಸಲು ಖಾಸಗಿ ಕ್ಯಾಪ್ಟಿವ್ ನೆಟ್‌ವರ್ಕ್ ಸ್ಥಾಪಿಸಲು ಸಂಪುಟ ನಿರ್ಧರಿಸಿದೆ.

‘‘ಭಾರತದ ದೂರ ಸಂಪರ್ಕದಲ್ಲಿ ಹೊಸ ಶಕೆಯೊಂದು ಆರಂಭವಾಗುತ್ತಿದೆ. ೫ಜಿ ತರಂಗಗುಚ್ಛ ಹರಾಜು ಘೋಷಿಸಲಾಗಿದೆೆ’’ ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ.
ದೂರಸಂಪರ್ಕ ಸುಧಾರಣೆ ಕಾರ್ಯಸೂಚಿಯ ಅಂಗವಾಗಿ ಅಭಿವೃದ್ಧಿ ಹಾಗೂ ಖಾಸಗಿ ಕ್ಯಾಪ್ಟಿವ್ ನೆಟ್‌ವರ್ಕ್ ಸ್ಥಾಪನೆಯನ್ನು ಸಕ್ರಿಯಗೊಳಿಸಲಾಗುವುದು ಎಂದು ಅವರು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಲ್ಲಿ ಡಿಜಿಟಲ್ ಇಂಡಿಯಾ ಮುಂದುವರಿಯುತ್ತಿದೆ. ಇಂದು ಘೋಷಿಸಲಾದ ತರಂಗಗುಚ್ಛ ಹರಾಜು ಭಾರತ್ ಕಾ ೫ ಜಿ ತರಂಗ ಪರಿಸರ ಅಭಿವೃದ್ಧಿಯ ಅಂತರ್ಗತ ಭಾಗ ಎಂದು ವೈಷ್ಣವ್ ಹೇಳಿದ್ದಾರೆ.

ದೂರಸಂಪರ್ಕ ನಿಯಂತ್ರಕ ಟಿಆರ್‌ಎಐ ಶಿಫಾರಸು ಮಾಡಿದ ಮೀಸಲು ಬೆಲೆಯಲ್ಲಿ ೫ಜಿ ಹರಾಜಿಗೆ ಸಂಪುಟ ಅನುಮೋದನೆ ನೀಡಿದೆ.
ಮೊಬೈಲ್ ಸೇವೆಗಳಿಗೆ 5ಜಿ ತರಂಗಗುಚ್ಛವನ್ನು ಮಾರಾಟ ಮಾಡಲು ಮೀಸಲು ಅಥವಾ ಫ್ಲೋರ್ ದರವನ್ನು ಸುಮಾರು ಶೇ. 39 ಕಡಿತಗೊಳಿಸಲು ಟ್ರಾಯ್ ಶಿಫಾರಸು ಮಾಡಿದೆ.

600 ಮೆಗಾ ಹರ್ಟ್ಝ್, 700 ಮೆಗಾ ಹರ್ಟ್ಝ್, 800 ಮೆಗಾ ಹರ್ಟ್ಝ್, 900 ಮೆಗಾ ಹರ್ಟ್ಝ್, 1800 ಮೆಗಾ ಹರ್ಟ್ಝ್, 2100 ಮೆಗಾ ಹರ್ಟ್ಝ್, 2300 ಮೆಗಾ ಹರ್ಟ್ಝ್, 2500 ಮೆಗಾ ಹರ್ಟ್ಝ್, 3300 ಮೆಗಾ ಹರ್ಟ್ಝ್, ಹಾಗೂ 26 ಗಿಗಾ ಹರ್ಟ್ಝ್‌ನ ತರಂಗಗುಚ್ಛದಲ್ಲಿ ಲಭ್ಯವಿರುವ ಎಲ್ಲ ಬ್ಯಾಂಡ್‌ಗಳು ಹರಾಜಿನ ಭಾಗವಾಗಿರಲಿದೆ.
ತರಂಗಗುಚ್ಛದ ಒಟ್ಟು 72097.85 ಮೆಗಾ ಹರ್ಟ್ಝ್ ಅನ್ನು ಹರಾಜಿಗೆ ಇರಿಸಲಾಗುವುದು. ಈ ಹರಾಜು ಏಕ ಕಾಲದಲ್ಲಿ ಬಹುಸುತ್ತಿನ ಆರೋಹಣ (ಎಸ್‌ಎಂಆರ್‌ಎ) ಇ-ಹರಾಜು ಆಗಿರಲಿದೆ.

ಈ ಹರಾಜಿನ ಮೂಲಕ ಪಡೆದುಕೊಂಡ ತರಂಗಗುಚ್ಛವನ್ನು ಕನಿಷ್ಠ 10 ವರ್ಷಗಳ ಬಳಿಕ ಹಿಂದೆ ಒಪ್ಪಿಸಬಹುದು. ತರಂಗಗುಚ್ಛವನ್ನು 20 ವರ್ಷಗಳಿಗೆ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News