'ಅಗ್ನಿಪಥ್' ವಿರುದ್ಧ ಹರ್ಯಾಣದಲ್ಲೂ ಭುಗಿಲೆದ್ದ ಆಕ್ರೋಶ, ಹಲವೆಡೆ ರಸ್ತೆ ತಡೆ

Update: 2022-06-16 11:40 GMT
Photo: Twitter/@ndtv

ಹೊಸದಿಲ್ಲಿ: ಸೇನೆಗೆ ಅಲ್ಪಾವಧಿಗೆ ಸೈನಿಕರ ನೇಮಕಾತಿಗಾಗಿ ಕೇಂದ್ರ ಸರಕಾರ ಘೋಷಿಸಿದ ಅಗ್ನಿಪಥ್ ಯೋಜನೆ ವಿರುದ್ಧ ಹರ್ಯಾಣಾದಲ್ಲೂ ಆಕ್ರೋಶ ಭುಗಿಲೆದ್ದಿದೆ.  ಗುರುಗ್ರಾಮ, ರೆವಾರಿ, ಪಲ್ವಾಲ್ ಮುಂತಾದೆಡೆ ನೂರಾರು ಯುವಕರು ಬೀದಿಗಿಳಿದು ಈ ಯೋಜನೆಯನ್ನು ವಿರೋಧಿಸಿ ಹೆದ್ದಾರಿಗಳನ್ನು ತಡೆದಿದ್ದಾರೆ.

ಪಲ್ವಾಲ್‍ನಲ್ಲಿ ಕಲ್ಲೆಸೆತದ ಘಟನೆಯಲ್ಲಿ ಪೊಲೀಸ್ ವಾಹನವೊಂದು ಹಾನಿಗೀಡಾಗಿದೆ. ಆಗ್ರಾಚೌಕ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 19 ಗೆ ತಡೆಯೊಡ್ಡಲಾಗಿದೆ.

ಗುರುಗ್ರಾಮದ ಬಿಲಾಸ್ಪುರ್ ಮತ್ತು ಸಿಧ್ರವಲಿ ಎಂಬಲ್ಲಿ ಪ್ರತಿಭಟನಾಕಾರರು ಬಸ್ ನಿಲ್ದಾಣಗಳಲ್ಲಿ ಮತ್ತು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಬಿಲಾಸ್ಪುರ್ ಚೌಕ್ ಪ್ರದೇಶದಲ್ಲಿ ಪ್ರತಿಭಟನೆಯಿಂದಾಗಿ ಗುರುಗ್ರಾಮ-ಜೈಪುರ್ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಯಿತು.

ಪ್ರತಿಭಟನೆಗಳನ್ನು ಹತ್ತಿಕ್ಕಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News