×
Ad

ಪ್ರಧಾನಿ ತಾಯಿಯ ಭೇಟಿಗೆ ಹೋಗುವಾಗಲೂ ಫೋಟೋ,ವಿಡಿಯೋ ತಂಡ :‌ ಟ್ವಿಟರ್‌ ನಲ್ಲಿ ವ್ಯಂಗ್ಯ

Update: 2022-06-18 13:51 IST
Photo: ANI 

ಅಹ್ಮದಾಬಾದ್:‌ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್‌ ರವರು ನೂರನೇ ವರ್ಷದ ಜನ್ಮದಿನವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ಈ ನಡುವೆ ತಾಯಿಯ ಭೇಟಿ ಸಂದರ್ಭದಲ್ಲೂ ಫೋಟೋ, ವಿಡಿಯೋಗಳಿಗಾಗಿ ಮಾಡುವ ತಯಾರಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಆಕ್ಷೇಪ ಹಾಗು ಟೀಕೆ ವ್ಯಕ್ತವಾಗಿದೆ. ಪ್ರಧಾನಿ ಮೋದಿಗಿಂತ ಮುಂಚೆ ಮನೆಗೆ ಫೋಟೊಗ್ರಾಫರ್‌ ಹಾಗು ವಿಡಿಯೋಗ್ರಾಫರ್ ಗಳು ತೆರಳುತ್ತಿರುವ ವೀಡಿಯೋ ಕುರಿತು ಹಲವರು ಕಟಕಿಯಾಡಿದ್ದಾರೆ.

ಮಾಧ್ಯಮಗಳು ಪ್ರಕಟಿಸಿರುವ ವೀಡಿಯೋವನ್ನು ಉಲ್ಲೇಖಿಸಿದ ಟ್ವಿಟರ್‌ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿಯವರು ತಾಯಿಯ ಮನೆಗೆ ಕಾಲಿಡುವುದಕ್ಕಿಂತ ಮುಂಚೆ ಫೋಟೊಗ್ರಾಫರ್‌ ಹಾಗು ವಿಡಿಯೋ ತಂಡದವರು ಮನೆಯ ಒಳಹೊಕ್ಕಿದ್ದಾರೆ. ಅವರೆಲ್ಲ ಒಳಗೆ ಹೋಗುವವರೆಗೂ ಪ್ರಧಾನಿ ಕಾರಲ್ಲಿ ಕೂತು ಕಾದಿದ್ದಾರೆ. ಬಳಿಕವೇ ಕೆಳಗಿಳಿದಿದ್ದಾರೆ. ತಾಯಿಯನ್ನು ಭೇಟಿಯಾಗಲು ಹೋಗುವಾಗಲೂ ಈ ನಾಟಕ ಏಕೆ ?" ಎಂದು ಒಬ್ಬರು ಪ್ರಶ್ನಿಸಿದ್ದಾರೆ.

"ಹೆತ್ತ ತಾಯಿಯನ್ನು ಭೇಟಿ ಮಾಡಲು ತೆರಳುವಾಗ ಯಾರಾದರೂ ಜೊತೆಗೆ ಫೋಟೊಗ್ರಾಫರ್‌ ಅನ್ನು ಕರೆದೊಯ್ಯುತ್ತಾರೆಯೇ? ಪ್ರಚಾರಕ್ಕೂ ಒಂದು ಮಿತಿ ಇರಬೇಕು" ಎಂದು ಇನ್ನೋರ್ವ ಟ್ವಿಟರ್‌ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

"ಮೊದಲು ಇಬ್ಬರು ಫೋಟೊಗ್ರಾಫರ್‌ ಗಳು ಒಳಗೆ ಹೋಗುತ್ತಾರೆ. ಅವರು ಕ್ಯಾಮರಾ ಸೆಟಪ್‌ ಮಾಡುವವರೆಗೆ ಇವರು ಕಾರಿನಲ್ಲಿ ಕಾಯುತ್ತಾರೆ. ಬಳಿಕ ಮನೆಯ ಒಳಗೆ ತೆರಳಿ ಹ್ಯಾಪಿ ಬರ್ತ್‌ಡೇ ಹೇಳುತ್ತಾರೆ" ಎಂದು ಇನ್ನೊಬ್ಬರು ಟ್ವಿಟರ್‌ ನಲ್ಲಿ ಕುಹಕವಾಡಿದ್ದಾರೆ. ಸದ್ಯ ಈ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಜೂನ್ 18, 1923 ರಂದು ಜನಿಸಿದ ಹೀರಾಬೆನ್ ಮೋದಿ ಇಂದು ತಮ್ಮ ಜೀವನದ 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ತಾಯಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

 "ಮಾ... ಇದು ಕೇವಲ ಒಂದು ಪದವಲ್ಲ, ಇದು ಭಾವನೆಗಳ ಗುಚ್ಛವನ್ನು ಸೆರೆಹಿಡಿಯುತ್ತದೆ. ಇಂದು, ಜೂನ್ 18 ರಂದು ನನ್ನ ತಾಯಿ ಹೀರಾಬಾ ತನ್ನ 100 ನೇ ವರ್ಷಕ್ಕೆ ಕಾಲಿಡುವ ದಿನವಾಗಿದೆ. ಈ ವಿಶೇಷ ದಿನದಂದು, ನಾನು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ,"  ಪ್ರಧಾನಿ ಮೋದಿ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

"ಇಂದು, ನನ್ನ ತಾಯಿ ಶ್ರೀಮತಿ ಹೀರಾಬಾ ತನ್ನ ನೂರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಹಂಚಿಕೊಳ್ಳಲು ನಾನು ತುಂಬಾ ಸಂತೋಷ ಮತ್ತು ಅದೃಷ್ಟವನ್ನು ಅನುಭವಿಸುತ್ತೇನೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷವಾಗಿದೆ. ನನ್ನ ತಂದೆ ಬದುಕಿದ್ದರೆ, ಅವರು ಕಳೆದ ವಾರ ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.  ನನ್ನ ತಾಯಿಯ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿರುವ ಕಾರಣ 2022 ವಿಶೇಷ ವರ್ಷವಾಗಿದೆ, ”ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News