ದ್ವಿತೀಯ ಪಿಯುಸಿ ಫಲಿತಾಂಶ: ಮುಹಮ್ಮದ್ ರುಮೈಝ್ ಗೆ 580 ಅಂಕ
Update: 2022-06-19 19:18 IST
ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ರುಮೈಝ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 580 (96.67%) ಅಂಕ ಗಳಿಸಿದ್ದಾರೆ.
ಇಂಗ್ಲಿಷ್ ನಲ್ಲಿ 91 ಅಂಕ, ಹಿಂದಿಯಲ್ಲಿ 92, ಭೌತಶಾಸ್ತ್ರದಲ್ಲಿ 100, ಕೆಮಿಸ್ಟ್ರಿಯಲ್ಲಿ 100, ಗಣಿತದಲ್ಲಿ 100ಕ್ಕೆ 100 ಹಾಗು ಕಂಪ್ಯೂಟರ್ ಸೈಯನ್ಸ್ ನಲ್ಲಿ 97 ಅಂಕದೊಂದಿಗೆ 96.67% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಡಾ. ಕೆ.ಎಂ. ಅಬ್ದುಲ್ ಅಝೀಝ್ ಮತ್ತು ಕೋಡಿಜಾಲ್ ನ ಹಸೀನ ಬೇಗಂ ದಂಪತಿಯ ಪುತ್ರ. ಅಲ್ಲದೆ ಮಾಜಿ ಶಾಸಕ ಹಾಗೂ ಕವಿ ದಿವಂಗತ ಬಿ.ಎಂ ಇದಿನಬ್ಬ ಅವರ ಮರಿ ಮೊಮ್ಮಗ.