ಮಳೆನೀರು ತುಂಬಿದ್ದ ಚರಂಡಿಗೆ ಬಿದ್ದ ದ್ವಿಚಕ್ರ ವಾಹನ; ಪೊಲೀಸ್ ಪೇದೆ, ಪತ್ನಿಗೆ ಗಾಯ

Update: 2022-06-20 06:14 GMT
Photo: Twitter/

ಹೊಸದಿಲ್ಲಿ: ಉತ್ತರ ಪ್ರದೇಶದ ಅಲಿಗಢದಲ್ಲಿ ಮಳೆ ನೀರಿನಿಂದ ತುಂಬಿದ್ದ ಚರಂಡಿಯೊಳಗೆ ದ್ವಿಚಕ್ರ ವಾಹನವೊಂದು ಬಿದ್ದಿದ್ದು ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿದ್ದ ಪೊಲೀಸ್ ಪೇದೆ ಹಾಗೂ ಅವರ ಪತ್ನಿ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪೊಲೀಸ್ ತನ್ನ ಪತ್ನಿಯೊಂದಿಗೆ  ಅಲಿಗಢದ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಜಲಾವೃತವಾದ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವುದು,  ವಾಹನದ  ಮುಂಭಾಗದ ಚಕ್ರಕ್ಕೆ ಏನೋ ವಸ್ತು ಹೊಡೆದಂತಾಗಿ ದಂಪತಿಗಳು ನೀರಿನಲ್ಲಿ ಮುಳುಗುವುದು ವೀಡಿಯೊದಲ್ಲಿ ಕಂಡುಬಂದಿದೆ.

ಸ್ವಲ್ಪ ಸಮಯದ ನಂತರ ನೆರೆಹೊರೆಯಲ್ಲಿದ್ದ ಜನರು ದಂಪತಿಯನ್ನು  ರಕ್ಷಿಸಲು ಧಾವಿಸಿದ್ದಾರೆ.

ನಾವು ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದೆವು. ಮಳೆ ನೀರು ಹರಿದು ಚರಂಡಿ ತೆರೆದು ನೀರು ತುಂಬಿದ್ದರಿಂದ ಸ್ಕೂಟರ್ ಸಮೇತ ಅದರೊಳಗೆ ಬಿದ್ದಿದ್ದೇವೆ. ನಮ್ಮಿಬ್ಬರಿಗೂ ಸ್ವಲ್ಪ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್ ಹೇಳಿದ್ದಾರೆ.

“ಉತ್ತರಪ್ರದೇಶದ  ಸ್ಮಾರ್ಟ್ ಸಿಟಿ ಅಲಿಗಢ. ನಾವು ಯಾರಿಗೆ ಧನ್ಯವಾದ ಹೇಳಬೇಕು" ಎಂದು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಸರ್ಕಾರದ ಬಹುಮುಖ್ಯವಾದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News