ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಟ್ವಿಟರ್‌ ನಲ್ಲಿ #AnswerMadiModi ಟ್ರೆಂಡಿಂಗ್

Update: 2022-06-20 18:08 GMT

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಐಐಎಸ್‌ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದ ಮೋದಿ, ಇನ್ನೂ ಹಲವು ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಜೂನ್‌ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳು, ಮೇಕೆದಾಟು ಯೋಜನೆ, ಹಿಂದಿ ಹೇರಿಕೆ, ಬೆಂಗಳೂರು ಉಪನಗರ ರೈಲು ಯೋಜನೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಿಸುವಂತೆ ಕಾಂಗ್ರೆಸ್ #AnswerMadiModi ಹೆಸರಿನಲ್ಲಿ ಅಭಿಯಾನ ಮಾಡಿದೆ. ನೆಟ್ಟಿಗರೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ.

“ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದು ಕೊಚ್ಚಿಕೊಂಡ ನೀವು ಮೈಸೂರಿಗೆ ನಯಾ ಪೈಸೆ ಹೆಚ್ಚಿನ ಹಣ ಕೊಟ್ಟಿಲ್ಲ - ಒಬ್ಬನೇ ಬಿಜೆಪಿ ಸಂಸದರೂ ಇಲ್ಲದ ತಮಿಳುನಾಡಿಗೆ 14 ವೈದ್ಯಕೀಯ ಕಾಲೇಜುಗಳು, ಆದರೆ 25 ಬಿಜೆಪಿ ಸಂಸದರನ್ನು ಕೊಟ್ಟ ನಮ್ಮ ರಾಜ್ಯಕ್ಕೆ ಅನ್ಯಾಯ - ಅಡಿಗಡಿಗೂ ಕೇಂದ್ರದಿಂದ ಅನಗತ್ಯ ಹಿಂದಿ ಹೇರಿಕೆ” ಎಂದು ಯತೀಂದ್ರ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

“ಮೋದಿಜಿ ಸ್ವಚ್ಛಭಾರತದ ಬಗ್ಗೆ ನಿಮ್ಮ ಕಾಳಜಿಯು ಕ್ಯಾಮರಾಮ್ಯಾನ್ ಜೊತೆಯಲ್ಲಿ ಕೆಲವು ಬಾಟಲಿಗಳನ್ನು ಎತ್ತಿಕೊಳ್ಳುವಲ್ಲಿ ಕೊನೆಗೊಳ್ಳುತ್ತದೆಯೇ? ನಿಮ್ಮನ್ನು ಸ್ವಾಗತಿಸಲು ಸಾವಿರಾರು ಫ್ಲೆಕ್ಸ್ ಬ್ಯಾನರ್‌ಗಳಿಗೆ ಏಕೆ ಆಕ್ಷೇಪಣೆ ಇಲ್ಲ? ಈ ಬ್ಯಾನರ್‌ಗಳು ಪ್ರಮುಖ ಆರೋಗ್ಯ ಮತ್ತು ಸುರಕ್ಷತಾ ಅಪಾಯ ಮತ್ತು ಸಾರ್ವಜನಿಕ ಉಪದ್ರವವೂ ಹೌದು!” ಎಂದು ಶ್ರೀ ಟಾಕ್ಸ್‌ ಎಂಬವರು ಪ್ರಶ್ನಿಸಿದ್ದಾರೆ.

“ಮೇಕೆದಾಟು ಯೋಜನೆ ಅನುಷ್ಠಾನ ಯಾವಾಗ? ಕೋಮುಗಲಭೆಗಳು ನಿಲ್ಲುವುದು ಯಾವಾಗ? ಬಿಎಸ್‌ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ತೆಗೆದಿರಿ?” ಎಂದು ಸಿಜಿನ್‌ ಟಿ ಸನ್ನಿ ಎಂಬವರು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ನಿರುದ್ಯೋಗ, ಜಿಡಿಪಿ ಕುಸಿತ, ಬೆಲೆ ಏರಿಕೆ ಮೊದಲಾದವುಗಳ ಬಗ್ಗೆ ಪ್ರಶ್ನಿಸಿದರೆ, ಹಲವಾರು ಮಂದಿ ಪಿಎಂ ಕೇರ್ಸ್‌ ನಿಧಿಯ ಬಗ್ಗೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ, ಈ ಅಭಿಯಾನದ ಭಾಗವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದು ಹಲವು ಪ್ರಶ್ನೆಗಳನ್ನು ಪ್ರಧಾನಿಗೆ ಕೇಳಿದ್ದಾರೆ.


#SaveKarnatakaFromModi #GobackModi ಎಂಬ ಹ್ಯಾಷ್‌ಟ್ಯಾಗ್‌ ಕೂಡಾ ಟ್ರೆಂಡ್‌ ಆಗುತ್ತಿದ್ದು, “ವಿದ್ಯಾರ್ಥಿಗಳು ಯಾವುದರೊಂದಿಗೆ ಬರುತ್ತಾರೆ ಎಂಬುದನ್ನು ಸರ್ವಾಧಿಕಾರಿ ಅರಿತುಕೊಂಡಿದ್ದಾರೆ.. ಹೇಡಿತನದ ಪ್ರಧಾನಿ, ಮಂಕಿ ಬಾತ್‌ಗೆ ಮಾತ್ರ ಸೂಕ್ತ. ಇದು ಅವರು ವಿದ್ಯಾರ್ಥಿಗಳನ್ನು (ಭಾರತದ ಭವಿಷ್ಯವನ್ನು) ನಡೆಸಿಕೊಳ್ಳುವ ಮತ್ತು ಬಳಸಿಕೊಳ್ಳುವ ವಿಧ. ಪ್ರತಿಯೊಬ್ಬ ಯುವಕರು ಅರ್ಥ ಮಾಡಿಕೊಳ್ಳಬೇಕು, ಇಂದಲ್ಲದಿದ್ದರೆ ಅದು ಎಂದೂ ಸಾಧ್ಯವಿಲ್ಲ” ಎಂದು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿರುವುದನ್ನು ಉಲ್ಲೇಖಿಸಿ ರೋಷನ್‌ ಗಣಪತಿ ಎಂಬವರು ಟ್ವೀಟ್‌ ಮಾಡಿದ್ದಾರೆ. 

“ಕರ್ನಾಟಕಕ್ಕೆ ಬರುವ ಮುನ್ನ ಚೂರು ಪ್ರಜ್ಞೆ ಹೊಂದಿ ಮಿ. ಮೋದಿ . ನಾವು ಕನ್ನಡಿಗರು ಭಕ್ತರಲ್ಲ!” ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News