24 ಗಂಟೆಗಳಲ್ಲಿ ಹಿಂತಿರುಗಿದರೆ ಮೈತ್ರಿ ತೊರೆಯುವ ಚಿಂತನೆ ಮಾಡಲಾಗುವುದು: ಬಂಡಾಯ ಶಾಸಕರಿಗೆ ಶಿವಸೇನೆ ಸಂದೇಶ

Update: 2022-06-23 10:42 GMT
Photo:PTI

ಹೊಸದಿಲ್ಲಿ: ಮುಂದಿನ 24 ಗಂಟೆಗಳಲ್ಲಿ ಮುಂಬೈಗೆ ವಾಪಸಾದರೆ ಕಾಂಗ್ರೆಸ್  –ಎನ್ ಸಿಪಿ ಮೈತ್ರಿ ತೊರೆಯುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಗುವಾಹಟಿಯಲ್ಲಿ ಬೀಡುಬಿಟ್ಟಿರುವ ತನ್ನ ಶಾಸಕರಿಗೆ ಶಿವಸೇನೆ ಸಂದೇಶ ರವಾನಿಸಿದೆ ಎಂದು NDTV ವರದಿ ಮಾಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಬುಧವಾರ ಕರೆದಿರುವ ಸಭೆಯಲ್ಲಿ ಶಿವಸೇನೆಯ ಕೇವಲ 13 ಶಾಸಕರು ಹಾಜರಾಗಿದ್ದರು. ದಶಕಗಳ ಹಿಂದೆ ಬಾಳಾ ಠಾಕ್ರೆ ಸ್ಥಾಪಿಸಿರುವ ಶಿವಸೇನೆ ಪಕ್ಷದ ಕೆಲವೇ ಶಾಸಕರಿಗೆ ಉದ್ಧವ್ ಠಾಕ್ರೆ ಅಧ್ಯಕ್ಷನಾಗಿ ಉಳಿಯುವಂತಾಗಿದೆ.

ಬಂಡಾಯ ಸಾರಿರುವ ಏಕನಾಥ ಶಿಂಧೆ ಅವರ ಬಳಿ ಶಾಸಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ಉದ್ಧವ್ ಠಾಕ್ರೆ ಜೊತೆಗಿದ್ದ ದೀಪಕ್ ಕೇಸರ್ಕರ್ ಸಹಿತ ಮೂವರು ಶಾಸಕರು ಇಂದು ಗುವಾಹಟಿ ವಿಮಾನ ಏರಿದ್ದಾರೆ. ಕಾಂಗ್ರೆಸ್-ಎನ್ ಸಿಪಿ ಮೈತ್ರಿಪಕ್ಷದ ಸ್ನೇಹ ಕಡಿದುಕೊಳ್ಳುವಂತೆ, ಬಿಜೆಪಿ ಜೊತೆ ಹೋಗುವಂತೆ ಶಾಸಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News