ಬಂಡಾಯ ಶಾಸಕರ ಭದ್ರತೆಯನ್ನು ಮಹಾರಾಷ್ಟ್ರ ಸರಕಾರ ಹಿಂಪಡೆದಿದೆ: ಏಕನಾಥ್ ಶಿಂಧೆ ಆರೋಪ

Update: 2022-06-25 08:11 GMT
Photo:PTI

ಹೊಸದಿಲ್ಲಿ: ತಾನು ಸೇರಿದಂತೆ 16 ಬಂಡಾಯ ಶಾಸಕರ ಭದ್ರತೆಯನ್ನು ಮಹಾರಾಷ್ಟ್ರ ರಾಜ್ಯ ಸರಕಾರ ಹಿಂಪಡೆದಿದೆ ಎಂದು ಶಿವಸೇನೆಯ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಇಂದು ಬೆಳಗ್ಗೆ ಆರೋಪಿಸಿದ್ದಾರೆ.

"ಇದು ರಾಜಕೀಯ ಸೇಡಿನ ಕ್ರಮ. ಶಾಸಕರನ್ನು ಹಾಗೂ  ಅವರ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲಿದೆ'' ಎಂದು ಶಿಂಧೆ ಟ್ವೀಟಿಸಿದ್ದಾರೆ.

ಆದಾಗ್ಯೂ, ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವುತ್  ಶಿಂಧೆ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.

ಉದ್ಧವ್ ಠಾಕ್ರೆ ಅವರು ಶಿವಸೇನಾ ಭವನದಲ್ಲಿ ಮಧ್ಯಾಹ್ನ 1 ಗಂಟೆಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದಾರೆ. ಶುಕ್ರವಾರ ಠಾಕ್ರೆ ಅವರು ಜಿಲ್ಲಾ ಮುಖ್ಯಸ್ಥರ ಸಭೆಯನ್ನು ಕರೆದಿದ್ದರು.ಸಭೆಯಲ್ಲಿ ಠಾಕ್ರೆ ಅವರು ಬಂಡಾಯ ಶಾಸಕರು "ಪಕ್ಷವನ್ನು ಒಡೆಯಲು" ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News