ರಾಷ್ಟ್ರಪತಿ ಚುನಾವಣೆ: ಪ್ರಧಾನಿ, ರಕ್ಷಣಾ ಸಚಿವರ ಬೆಂಬಲ ಕೋರಿದ ಯಶವಂತ್ ಸಿನ್ಹಾ

Update: 2022-06-25 07:14 GMT
Photo:PTI

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ   ಜುಲೈ 18 ರ ಚುನಾವಣೆಗೆ ಬೆಂಬಲ ಕೋರಿದ್ದಾರೆ.

ಸಿನ್ಹಾ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಕರೆ ಮಾಡಿದರು ಹಾಗೂ ರಾಷ್ಟ್ರಪತಿ ಚುನಾವಣೆಗೆ ಸಂಯೋಜಿತ ವಿರೋಧ ಪಕ್ಷದ ಅಭ್ಯರ್ಥಿಯಾಗಿ ತನ್ನನ್ನು ಹೆಸರಿಸಿದಾಗ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ತೋರಿದ ಬದ್ಧತೆಯನ್ನು ನೆನಪಿಸಿದ್ದಾರೆ.

"ನಾವು ನಮ್ಮ ಪ್ರಚಾರವನ್ನು ಶ್ರದ್ಧೆಯಿಂದ ಆರಂಭಿಸಿದ್ದೇವೆ ಮತ್ತು ಚುನಾವಣೆಯಲ್ಲಿ ಬೆಂಬಲವನ್ನು ಪಡೆಯಲು ಪ್ರತಿಯೊಬ್ಬರನ್ನು ತಲುಪುತ್ತೇವೆ" ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮೂಲಗಳು ತಿಳಿಸಿವೆ.

ಸಿನ್ಹಾ ಅವರು ಪಿಎಂ ಮೋದಿ ಹಾಗೂ  ಸಿಂಗ್ ಅವರ ಕಚೇರಿಗಳಿಗೆ ಕರೆ ಮಾಡಿದ್ದಾರೆ ಮತ್ತು ಅವರ ಉಮೇದುವಾರಿಕೆಗೆ ಬೆಂಬಲ ಕೋರಿ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಕೇಂದ್ರ ಸಚಿವರಾದ ಸಿನ್ಹಾ ಅವರು ತಮ್ಮ ಮಾರ್ಗದರ್ಶಕ  ಹಾಗೂ  ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರನ್ನೂ ಸಂಪರ್ಕಿಸಿ ಬೆಂಬಲ ಕೋರಿದ್ದಾರೆ.

ಸಿನ್ಹಾ ಅವರು ಸೋಮವಾರದಂದು ಪ್ರಮುಖ  ವಿರೋಧ ಪಕ್ಷದ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News