ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ನೀವು ಭಾಗಿಯಾಗಬೇಡಿ: ಫಡ್ನವಿಸ್ ಗೆ ಸಂಜಯ್ ರಾವತ್ ಸಲಹೆ

Update: 2022-06-25 07:46 GMT
ಸಂಜಯ್ ರಾವತ್ (Photo:PTI)

ಹೊಸದಿಲ್ಲಿ: ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವತ್ ಅವರು ತಮ್ಮ ಪಕ್ಷದಲ್ಲಿನ ಬಂಡಾಯದ ಕುರಿತ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ  ಬಂಡಾಯಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ಹೇಳಲಾಗುತ್ತಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ಗೆ 'ಸಲಹೆ' ನೀಡಿದ್ದಾರೆ.

"ಈ ಬಿಕ್ಕಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಡಿ ಎಂದು  ನಾನು ದೇವೇಂದ್ರ ಫಡ್ನವೀಸ್‌ಗೆ ಒಂದೇ ಒಂದು ಸಲಹೆಯನ್ನು ನೀಡುತ್ತೇನೆ. ಒಂದು ದಿನ  ಬೆಳಿಗ್ಗೆ ಏನಾಗಿದೆಯೇ ಅದು ಆಗದಂತೆ ನೋಡಿಕೊಳ್ಳಿ’’ ಎಂದು  ರಾವತ್ ಹೇಳಿದ್ದಾರೆ.

2019ರಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ  ಕಾಂಗ್ರೆಸ್ ಪಕ್ಷದ ನಾಯಕ (ಎನ್‌ಸಿಪಿ) ಅಜಿತ್ ಪವಾರ್ ರೊಂದಿಗಿನ ದೇವೇಂದ್ರ ಫಡ್ನವಿಸ್ ಅವರ  ಅಲ್ಪಾವಧಿಯ 80 ಗಂಟೆಗಳ ಸರಕಾರವನ್ನು ಉಲ್ಲೇಖಿಸಿ ರಾವುತ್ ಈ ಹೇಳಿಕೆ ನೀಡಿದ್ದಾರೆ.

2019 ರಲ್ಲಿ ಅಜಿತ್ ಪವಾರ್ ಅವರು ಬಿಜೆಪಿಯೇತರ ಸರಕಾರವನ್ನು ರಚಿಸಲು ತಮ್ಮ ಪಕ್ಷವು ಶಿವಸೇನೆ ಹಾಗೂ  ಕಾಂಗ್ರೆಸ್‌ನೊಂದಿಗೆ ಸಭೆಗಳನ್ನು ನಡೆಸುತ್ತಿರುವಾಗಲೂ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಕೈಜೋಡಿಸುವ ಮೂಲಕ ರಾಜ್ಯದ ರಾಜಕೀಯ ವಲಯಗಳನ್ನು ಬೆರಗುಗೊಳಿಸಿದ್ದರು.

ದೇವೇಂದ್ರ ಫಡ್ನವಿಸ್ ನಂತರ ಈ ನಿರ್ಧಾರವನ್ನು "ತಪ್ಪು" ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವರು "ಅದಕ್ಕೆ ವಿಷಾದಿಸುವುದಿಲ್ಲ" ಎಂದು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲದ ಆರೋಪವನ್ನು ಬಿಜೆಪಿ ನಿರಾಕರಿಸಿದ್ದರೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಿಕಟವರ್ತಿಯಾಗಿರುವ ಯುವ ಸಂಸದರೊಬ್ಬರು ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಕನಿಷ್ಠ ಮೂವರು ಅಸ್ಸಾಂ ಬಿಜೆಪಿ ಸಚಿವರು ಗುವಾಹಟಿ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ವಿಷಯಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News