ಬಾಲಿವುಡ್‍ನಲ್ಲಿ 30 ವರ್ಷ ಪೂರೈಸಿದ ಸಂದರ್ಭ ʼಪಠಾಣ್ʼ ಹೊಸ ಲುಕ್ ಶೇರ್ ಮಾಡಿದ ಶಾರುಖ್

Update: 2022-08-13 08:30 GMT

ಹೊಸದಿಲ್ಲಿ: ಬಾಲಿವುಡ್‍ನಲ್ಲಿ 30 ವರ್ಷ ಪೂರೈಸಿದ ಸಂಭ್ರಮದಲ್ಲಿ ನಟ ಶಾರುಖ್ ಖಾನ್ ಇದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರು ತಮ್ಮ ಮುಂದಿನ ಚಿತ್ರ ʼಪಠಾಣ್ʼ ನಲ್ಲಿನ ತಮ್ಮ ಹೊಸ ಲುಕ್‍ನ ಫೋಟೋ ಶೇರ್ ಮಾಡಿದ್ದಾರೆ. ಅದರಲ್ಲಿ ʼ30 ಇಯರ್ಸ್ ಆಫ್ ಶಾರುಖ್ ಖಾನ್ʼ ಎಂದು ಬರೆಯಲಾಗಿದೆ.

ಈ ಪೋಸ್ಟರ್ ಶೇರ್ ಮಾಡಿ ಶಾರುಖ್ ತಮ್ಮ  ಅಭಿಮಾನಿಗಳು ತಮ್ಮ ಮೇಲೆ ತೋರಿಸಿದ ಪ್ರೀತಿ ಮತ್ತು ಆದರಗಳಿಗೆ ತಾವು ಆಭಾರಿ ಎಂದು ಹೇಳಿದ್ದಾರೆ. "30 ವರ್ಷಗಳು ಮತ್ತು ಎಣಿಸುವುದಿಲ್ಲ ಏಕೆಂದರೆ ಸದಾ ಇರುವ ನಿಮ್ಮ ಪ್ರೀತಿ ಮತ್ತು ನಗು. ಜನವರಿ 25, 2023 ರಂದು ವೈಆರ್‌ಎಫ್50 ನೊಂದಿಗೆ ಪಠಾಣ್ ಆಚರಿಸಿ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ" ಎಂದು ಶಾರುಖ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News