ಉಪ ಚುನಾವಣೆ: ಆಝಂಗಡ, ರಾಂಪುರದಲ್ಲಿ ಎಸ್ ಪಿ, ಪಂಜಾಬ್ ನ ಸಂಗ್ರೂರ್ ನಲ್ಲಿ ಆಪ್ ಗೆ ಮುನ್ನಡೆ

Update: 2022-06-26 05:22 GMT
Photo: PTI

ಹೊಸದಿಲ್ಲಿ: ಜೂನ್ 23 ರಂದು ದಿಲ್ಲಿ ಹಾಗೂ  ಐದು ರಾಜ್ಯಗಳಾದ್ಯಂತ ಮೂರು ಲೋಕಸಭೆ ಹಾಗೂ  ಏಳು ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದೆ.

ಉತ್ತರಪ್ರದೇಶದ ಆಝಂಗಡ ಹಾಗೂ ರಾಂಪುರ ಲೋಕಸಭಾ ಉಪ ಚುನಾವಣೆಯ ಮತ ಎಣಿಕೆಯಲ್ಲಿ  ಸಮಾಜವಾದಿ ಪಕ್ಷ ಆರಂಭಿಕ ಮುನ್ನಡೆಯಲ್ಲಿದೆ.ಆಝಂಗಡದಲ್ಲಿ ಎಸ್ಪಿ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.

ಪಂಜಾಬ್ ನ ಸಂಗ್ರೂರ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಿಮ್ರಾನ್ ಜಿತ್ ಸಿಂಗ್ ಮಾನ್  ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ.

  ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ  ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ  ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ತ್ರಿಪುರಾದಲ್ಲಿ ಬಿಜೆಪಿ 3 ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆಯಲ್ಲಿದೆ.

ತ್ರಿಪುರಾದ ಅಗರ್ತಲಾ, ಜುಬರಾಜನಗರ, ಸುರ್ಮಾ ಹಾಗೂ  ಟೌನ್ ಬರ್ಡೋವಾಲಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಟೌನ್ ಬರ್ಡೋವಾಲಿಯಿಂದ ಸ್ಪರ್ಧಿಸಿರುವ ರಾಜ್ಯಸಭಾ ಸಂಸದ  ಸಹಾ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ  ಕ್ಷೇತ್ರ  ಗೆಲ್ಲಲೇಬೇಕಾಗಿದೆ.

ವಿಧಾನಸಭಾ ಉಪಚುನಾವಣೆ ನಡೆದ ಇತರ ಸ್ಥಾನಗಳೆಂದರೆ: ದಿಲ್ಲಿಯ ರಾಜಿಂದರ್ ನಗರ, ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಮಂದರ್ ಹಾಗೂ  ಆಂಧ್ರಪ್ರದೇಶದ ಆತ್ಮಕೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News