ಉಪ ಚುನಾವಣೆ: ಅಝಂಗಡ, ರಾಂಪುರದಲ್ಲಿ ಬಿಜೆಪಿಗೆ ಮುನ್ನಡೆ, ಪಂಜಾಬ್ ನ ಸಂಗ್ರೂರ್ ನಲ್ಲಿ ಆಪ್ ಗೆ ಹಿನ್ನಡೆ

Update: 2022-06-26 07:42 GMT
Photo:PTI

ಹೊಸದಿಲ್ಲಿ: ಜೂನ್ 23 ರಂದು ದಿಲ್ಲಿ ಹಾಗೂ  ಐದು ರಾಜ್ಯಗಳಾದ್ಯಂತ ಮೂರು ಲೋಕಸಭೆ ಹಾಗೂ  ಏಳು ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ರವಿವಾರ  ಬೆಳಗ್ಗೆ ಆರಂಭವಾಗಿದೆ.

ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ 14,140 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರೆ, ಅಝಂಗಢದಲ್ಲಿ ಬಿಜೆಪಿಯ  ಇನ್ನೋರ್ವ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ 848 ಮತಗಳಿಂದ ಮುಂದಿದ್ದಾರೆ. 

ಆಝಂಗಡ ಹಾಗೂ ರಾಂಪುರ ಎರಡೂ ಸ್ಥಾನಗಳು ಅಖಿಲೇಶ್ ಯಾದವ್ ನೇತೃತ್ವದ ಪಕ್ಷದ ಭದ್ರಕೋಟೆಗಳಾಗಿವೆ. ಮಾಜಿ ಮುಖ್ಯಮಂತ್ರಿ ಯಾದವ್ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಅಝಂಗಡ ಸ್ಥಾನವನ್ನು ತೆರವುಗೊಳಿಸಿದರೆ, ರಾಂಪುರ ಸ್ಥಾನವನ್ನು ಪಕ್ಷದ ಪ್ರಮುಖ  ಮುಸ್ಲಿಂ ನಾಯಕ ಅಝಂ ಖಾನ್ ಅವರಿಂದ ತೆರವಾಗಿತ್ತು.

ಅಝಂಗಢದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಶಾ ಆಲಂ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿ ಬಿಜೆಪಿ ಹಾಗೂ  ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿಗಳಿಬ್ಬರಿಗೂ  ಪೈಪೋಟಿ ನೀಡಿದ್ದಾರೆ . ಬಿಎಸ್ಪಿ  ಪ್ರದರ್ಶನವು ಸಮಾಜವಾದಿ ಪಕ್ಷದ ಧಮೇಂದ್ರ ಯಾದವ್ ಮೇಲೆ ಪ್ರಮುಖವಾಗಿ ಪ್ರಭಾವ ಬೀರಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಂದ ತೆರವಾದ ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ  ಶಿರೋಮಣಿ ಅಕಾಲಿದಳದ (ಅಮೃತಸರ) ಸಿಮ್ರಾನ್ ಜಿತ್ ಸಿಂಗ್ ಮಾನ್ 2,43,834 ಮತಗಳೊಂದಿಗೆ ಸ್ಥಿರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎಎಪಿಯ ಗುರ್ಮೈಲ್ ಸಿಂಗ್ 2,38,989 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ.

ತ್ರಿಪುರಾದಲ್ಲಿ ಅಗರ್ತಲಾ, ಜುಬಾರಾಜ್‌ನಗರ, ಸುರ್ಮಾ  ಹಾಗೂ  ಟೌನ್ ಬರ್ದೋವಾಲಿ ಎಂಬ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ಚುನಾಯಿತರಾಗಬೇಕಾಗಿದ್ದ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಟೌನ್ ಬರ್ಡೋವಾಲಿಯಲ್ಲಿ 6,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News