ಸಿಧು ಮೂಸೆವಾಲಾ ಹತ್ಯೆಯ ಬಳಿಕ ಬಿಡುಗಡೆಯಾದ ಕೊನೆಯ ಹಾಡನ್ನು ತೆಗೆದುಹಾಕಿದ ಯೂಟ್ಯೂಬ್‌

Update: 2022-06-26 12:12 GMT
ಸಿಧು ಮೂಸೆವಾಲಾ 

ಹೊಸದಿಲ್ಲಿ: ಸಿಧು ಮೂಸೆವಾಲಾ ಅವರ ಹತ್ಯೆಯ ಬಳಿಕ ಬಿಡುಗಡೆಯಾದ ಎಸ್‌ವೈಎಲ್ (SYL) ಶೀರ್ಷಿಕೆಯ ಹಾಡನ್ನು ಯೂಟ್ಯೂಬ್‌ ನಿಂದ ತೆಗೆದುಹಾಕಲಾಗಿದೆ. ಇದು ಪಂಜಾಬಿನ ನೀರಿನ ಸಮಸ್ಯೆಯ ಕುರಿತು ಇರುವ ಹಾಡಾಗಿದ್ದು, SYL ಶೀರ್ಷಿಕೆಯು ʼಸಟ್ಲೆಜ್-ಯಮುನಾ ಲಿಂಕ್ʼ ಕಾಲುವೆಯನ್ನು ಸೂಚಿಸುತ್ತದೆ. 214 ಕಿಲೋಮೀಟರ್ ಉದ್ದದ ಸಟ್ಲೆಜ್ ಯಮುನಾ ಲಿಂಕ್ ಕಾಲುವೆಯು ಪಂಜಾಬ್ ಮತ್ತು ಹರಿಯಾಣದ ನಡುವೆ ಮೂರು ದಶಕಗಳಿಂದ ಬಗೆಹರಿಯದ ವಿವಾದವಾಗಿದೆ.

ಮೇ ತಿಂಗಳಲ್ಲಿ ಸಿಧು ಮೂಸೆವಾಲಾ ಬರೆದು ಸಂಯೋಜಿಸಿದ ಹೊಸ ಹಾಡನ್ನು ಸಂಗೀತ ನಿರ್ಮಾಪಕ MXRCI ಶುಕ್ರವಾರ, ಜೂನ್ 23 ರಂದು YouTube ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಈಗ ಅದರ ವೀಡಿಯೊ ಲಭ್ಯವಿಲ್ಲ. ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, " ಈ ದೇಶದ ಡೊಮೇನ್‌ನಲ್ಲಿ ಕಂಟೆಂಟ್ ಲಭ್ಯವಿಲ್ಲ" ಎಂಬ ಸಂದೇಶವನ್ನು ಯೂಟ್ಯೂಬ್‌ ನೀಡಿದೆ. 

ಈ ಹಾಡಿನ ವೀಡಿಯೊ ಸ್ಟ್ರೀಮಿಂಗ್ ಪ್ರಾರಂಭವಾದಾಗಿನಿಂದ, ಹಾಡು 27 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 3.3 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News