‘ಅಗ್ನಿಪಥ್’ ಪ್ರತಿಭಟನೆಗಳ ಹಿಂದಿನ ಕತೆ

Update: 2022-06-27 04:51 GMT

ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆಯ ಪ್ರಕಾರ, ಹೊಸ ಸೈನಿಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ ಹಾಗೂ ಆ ಅವಧಿ ಮುಗಿದ ಬಳಿಕ ಅವರ ಪೈಕಿ ಕೇವಲ ಶೇ.25 ಮಂದಿಯನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಹೊರಬೀಳುವ ‘ಅಗ್ನಿ ವೀರರು’ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ ಮತ್ತು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

‘‘ಯಾರು ಕಲಿಯುವುದಿಲ್ಲವೋ ಅವರು ಸೇನೆಗೆ ಸೇರಲು ಪ್ರಯತ್ನ ಪಡುತ್ತಾರೆ. ಅವರು ಕಲಿತಿದ್ದರೆ ಅಧಿಕಾರಿಗಳಾಗುತ್ತಿರಲಿಲ್ಲವೇ?’’ ಎಂದು ಉತ್ತರ ಪ್ರದೇಶದ ಸಕತ್‌ಪುರ ಗ್ರಾಮದ ನಿವಾಸಿ 23 ವರ್ಷದ ಗಜೇಂದ್ರ ಪ್ರಶ್ನಿಸುತ್ತಾರೆ.

ಸಕತ್‌ಪುರವು ಆಗ್ರಾದ ಚಾಹರ್‌ಬತ್ತಿ ವಲಯದಲ್ಲಿರುವ 422 ಗ್ರಾಮಗಳ ಪೈಕಿ ಒಂದು. ಜಾಟರ ಪ್ರಾಬಲ್ಯದ ಈ ವಲಯದಲ್ಲಿ, ಬಹುತೇಕ ಪ್ರತಿಯೊಬ್ಬ ಯುವಕನೂ ಸರಕಾರಿ ಕೆಲಸಕ್ಕಾಗಿ, ಅದರಲ್ಲೂ ಮುಖ್ಯವಾಗಿ ಸಶಸ್ತ್ರ ಪಡೆಗಳಲ್ಲಿ ಕೆಲಸ ಪಡೆಯುವುದಕ್ಕಾಗಿ ಹಾತೊರೆಯುತ್ತಾನೆ. ಸೇನಾ ಯೋಧರಾದರೆ ಬದುಕಿನಲ್ಲಿ ನೆಲೆ ಕಂಡುಕೊಂಡಂತೆ ಎಂಬುದಾಗಿ ಅವರು ಭಾವಿಸುತ್ತಾರೆ. ಕೆಲಸದ ಭದ್ರತೆ, ಪಿಂಚಣಿ, ವರದಕ್ಷಿಣೆ ಮತ್ತು ಸಾಮಾಜಿಕ ಸ್ಥಾನಮಾನ- ಎಲ್ಲವೂ ಸೈನಿಕನನ್ನು ಹುಡುಕಿ ಕೊಂಡು ಬರುತ್ತದೆ. ಆದರೆ, ಈಗ ಸೇನೆಯ ನೂತನ ‘ಅಗ್ನಿಪಥ್’ ನೇಮಕಾತಿ ಯೋಜನೆಯು ಅವರ ಕಲ್ಪನೆಯ ಬದುಕಿನಲ್ಲಿ ಬಿರುಕುಗಳನ್ನು ಸೃಷ್ಟಿಸಿದೆ.

ಹತ್ತನೇ ತರಗತಿ ಪಾಸ್ ಪ್ರಮಾಣಪತ್ರ ಹೊಂದಿರುವ ಯಾವುದೇ ವ್ಯಕ್ತಿ ಸೇನೆಯಲ್ಲಿ ಜನರಲ್ ಡ್ಯೂಟಿ ಸೈನಿಕನಾಗಲು ಪ್ರಯತ್ನವನ್ನು ಮಾಡಬಹುದಾಗಿದೆ ಎನ್ನುವುದನ್ನು ಹೆಚ್ಚಿನ ಯುವಕರು ತಿಳಿದುಕೊಂಡಿದ್ದಾರೆ. ಹಾಗಾಗಿ, 12ನೇ ತರಗತಿ (ಈ ವಲಯದಲ್ಲಿ ಅದನ್ನು ಇಂಟರ್‌ಮೀಡಿಯಟ್ ಎಂಬುದಾಗಿ ಕರೆಯಲಾಗುತ್ತದೆ), ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಈ ಯುವಕರು ಅನಗತ್ಯ ಎಂಬುದಾಗಿ ಭಾವಿಸಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸವು ‘ಓದುವವರಿಗಾಗಿ’ ಎಂದು ಚಾಹರ್‌ಬತ್ತಿಯ ಗ್ರಾಮಸ್ಥರು ಭಾವಿಸು ತ್ತಾರೆ. ನ್ಯಾಶನಲ್ ಡಿಫೆನ್ಸ್ ಅಕಾಡಮಿ (ಎನ್‌ಡಿಎ) ಮತ್ತು ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ (ಸಿಡಿಎಸ್) ಪರೀಕ್ಷೆ ಬರೆಯುವವರಿಗೆ ಹಾಗೂ ಶಿಕ್ಷಕರು ಮತ್ತು ನಾಗರಿಕ ಸೇವೆಗಳು ಮುಂತಾದ ವೃತ್ತಿಗಳ ಮೇಲೆ ಕಣ್ಣಿಟ್ಟವರಿಗೆ ಉನ್ನತ ವಿದ್ಯಾಭ್ಯಾಸ ಎನ್ನುವುದು ಗ್ರಾಮಸ್ಥರ ನಿಲುವು.

‘‘ಹೆಚ್ಚಿನ ಜಾಟ್ ಕುಟುಂಬಗಳು ತಮ್ಮ ಮಕ್ಕಳನ್ನು ರಕ್ಷಣಾ ಪಡೆಗಳಿಗೆ ಕಳುಹಿಸಲು ಬಯಸುತ್ತವೆ. ಅವರ ಮೊದಲ ಆಯ್ಕೆ ಸೇನೆ. ಭಾರತೀಯ ವಾಯುಪಡೆ, ಉತ್ತರಪ್ರದೇಶ ಪೊಲೀಸ್,ನೌಕಾಪಡೆ, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ನಂತರದ ಆಯ್ಕೆಗಳು. ಹೆಚ್ಚು ಓದುವವರು ಎನ್‌ಡಿಎ, ಸಿಡಿಎಸ್, ಎಸ್‌ಎಸ್‌ಸಿ, ಸಿಜಿಎಲ್ (ಸ್ಟಾಫ್ ಸೆಲೆಕ್ಷನ್ ಕಮಿಶನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ- ಕೇಂದ್ರ ಸರಕಾರದ ಉದ್ಯೋಗಗಳಿಗಾಗಿ) ಮುಂತಾದ ಪರೀಕ್ಷೆಗಳಿಗೆ ಹೋಗುತ್ತಾರೆ. ಈ ವಲಯವು ಐಎಎಸ್ ಮತ್ತು ಐಪಿಎಸ್‌ಅಧಿಕಾರಿ ಗಳನ್ನೂ ಸೃಷ್ಟಿಸಿದೆ’’ ಎಂದು ರಕ್ಷಣಾ ಪಡೆಗಳ ಪರೀಕ್ಷೆಗಳು ಮತ್ತು ಎಸ್‌ಎಸ್‌ಸಿ ಸಿಜಿಎಲ್‌ಗಳ ದೈಹಿಕ ಕ್ಷಮತೆ ಪರೀಕ್ಷೆಗಳಿಗೆ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವ ನಿರಂಜನ್ ಚಾಹರ್ ಹೇಳುತ್ತಾರೆ.

ಚಾಹರ್‌ಬತ್ತಿಗೆ ಒಮ್ಮೆ ಭೇಟಿ ನೀಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅಂದರೆ, ಸೇನೆಯಲ್ಲಿ ಸೈನಿಕ (ಜನರಲ್ ಡ್ಯೂಟಿ) ಮುಂತಾದ ಕೆಳ ದರ್ಜೆಯ ಹುದ್ದೆಗಳಿಗಾಗಿ ಸ್ಪರ್ಧಿಸುವ ವರ ಸಂಖ್ಯೆಯು ಅಧಿಕಾರಿ ದರ್ಜೆಯ ಹುದ್ದೆಗಳಿಗಾಗಿ ಸ್ಪರ್ಧಿಸುವವರ ಸಂಖ್ಯೆಗಿಂತ ತುಂಬಾ ಹೆಚ್ಚಾಗಿದೆ.ನೂರಾರು ಯುವಕರು 9 ಮತ್ತು 10ನೇ ತರಗತಿ ತಲುಪಿದ ಕೂಡಲೇ ರಕ್ಷಣಾ ಪಡೆಗಳಿಗೆ ಸೇರಲು ದೈಹಿಕ ಕ್ಷಮತೆ ಪರೀಕ್ಷೆಗಳಿಗಾಗಿ ಸಿದ್ಧತೆಗಳನ್ನು ಆರಂಭಿಸುತ್ತಾರೆ. ಹೆಚ್ಚಿನವರ ಪ್ರಥಮ ಆಯ್ಕೆ ಸೇನೆ.

ಅಗ್ನಿಪಥ್ ಯೋಜನೆಯ ಬಗ್ಗೆ ಈ ಯುವಕರು ಹೊಂದಿರುವ ದೊಡ್ಡ ಆಕ್ಷೇಪವೆಂದರೆ, ಒಮ್ಮೆ ಸೇರ್ಪಡೆಗೊಂಡ ನಾಲ್ಕು ವರ್ಷಗಳ ಬಳಿಕ ಇನ್ನೊಂದು ಪರೀಕ್ಷೆಯನ್ನು ಎದುರಿಸುವುದು. ಒಂದು ವೇಳೆ ಆ ಪರೀಕ್ಷೆಯಲ್ಲಿ ವಿಫಲರಾದರೆ ಸೇನೆಗೆ ಖಾಯಂ ಆಗಿ ಸೇರ್ಪಡೆಗೊಳ್ಳಲು ಅಸಾಧ್ಯವಾಗಿ ಹೊರಬೀಳಬೇಕಾಗುತ್ತದೆ. ವಿದ್ಯಾಭ್ಯಾಸವನ್ನು ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆಯ ಪ್ರಕಾರ, ಹೊಸ ಸೈನಿಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ ಹಾಗೂ ಆ ಅವಧಿ ಮುಗಿದ ಬಳಿಕ ಅವರ ಪೈಕಿ ಕೇವಲ ಶೇ.25 ಮಂದಿಯನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಹೊರಬೀಳುವ ‘ಅಗ್ನಿವೀರರು’ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ ಮತ್ತು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಈ ಯೋಜನೆಯು ಸೇನೆಯ ವಯಸ್ಸನ್ನು ಕಡಿಮೆ ಮಾಡುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಸ್ವಾಗತಿಸಿದ್ದಾರೆ. ಆದರೆ, ಅದು ಉದ್ಯೋಗ ಸೃಷ್ಟಿಯ ಯೋಜನೆ ಎಂಬುದಾಗಿ ಹಲವು ನಿವೃತ್ತ ಸೈನಿಕರು ಅದನ್ನು ಟೀಕಿಸಿದ್ದಾರೆ. ಆದರೆ, ಪ್ರತಿಭಟನಾನಿರತ ಯುವಕರು ಅದನ್ನು ಉದ್ಯೋಗಕ್ಕೆ ಬೆದರಿಕೆ ಎಂಬುದಾಗಿ ಪರಿಗಣಿಸಿದ್ದಾರೆಯೇ ಹೊರತು, ಉದ್ಯೋಗ ಸೃಷ್ಟಿಯ ಯೋಜನೆಯಾಗಿ ಅಲ್ಲ.

ಸೇವೆಯ ಪರಂಪರೆ

‘‘ಜಾಟರ ರಕ್ತದಲ್ಲಿ ದೇಶಪ್ರೇಮ ಹರಿಯುತ್ತದೆ. ಕುಟುಂಬ ಸದಸ್ಯರೊಬ್ಬರು ಸೇನೆಯಲ್ಲಿದ್ದರೆ ಅದನ್ನು ‘ಶಾನ್’ (ಹೆಮ್ಮೆ) ಎಂಬುದಾಗಿ ಪರಿಗಣಿಸಲಾಗುತ್ತದೆ’’ ಎಂದು ಚಾಹರ್‌ಬತ್ತಿ ವಲಯದ ಮನ್‌ಕೆಂಡ ಗ್ರಾಮದ ಯುವಕ ಅನಿಲ್ ಹೇಳುತ್ತಾರೆ.

ಸಾಂಪ್ರದಾಯಿಕವಾಗಿ ಕೃಷಿ ಸಮುದಾಯವಾಗಿರುವ ಜಾಟರನ್ನು ಬ್ರಿಟಿಷರು ಸೈನಿಕ ಜನಾಂಗ ಎಂಬುದಾಗಿ ಪರಿಗಣಿಸಿದ್ದರು. ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಜಾಟರು ಅತಿ ಹೆಚ್ಚಿನ ಸಂಖ್ಯೆ ಯಲ್ಲಿ ಸೇವೆ ಸಲ್ಲಿಸಿದ್ದರು. ಸಶಸ್ತ್ರ ಪಡೆಗಳಿಗೆ, ಅದರಲ್ಲೂ ಮುಖ್ಯವಾಗಿ ಸೇನೆಗೆ ಸೇರುವ ಪರಿ ಪಾಠವು ಈ ಸಮುದಾಯದಲ್ಲಿ ಈಗಲೂ ಮುಂದುವರಿದಿದೆ. ಜಾಟರು ಮುಖ್ಯವಾಗಿ ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಹಾಗೂ ಉತ್ತರ ಭಾರತದ ಇತರ ಭಾಗಗಳಲ್ಲಿ ನೆಲೆಸಿದ್ದಾರೆ.

‘‘ಪ್ರತೀ ಕುಟುಂಬದ ಒಂದು ಮಗು ಸೇನೆಯಲ್ಲಿರಬೇಕು ಎನ್ನುವುದು ಸಂಪ್ರದಾಯವಾಗಿದೆ’’ ಎಂದು ನಿರಂಜನ್ ಹೇಳುತ್ತಾರೆ. ‘‘ಅಲ್ಲಿನ ಪರಿಸ್ಥಿತಿ ಹೀಗಿದೆ: ನೆರೆಮನೆಯವರ ಮಗ ಸೇನೆಗೆ ಆಯ್ಕೆ ಯಾದರೆ, ನೀವೂ ಸೇನೆಗೆ ಸೇರಿ ಎಂಬುದಾಗಿ ಹೆತ್ತವರು ತಮ್ಮ ಪುತ್ರರಿಗೆ ಬೋಧಿಸುತ್ತಾರೆ. ಬುದ್ಧಿವಂತರು ಶಿಕ್ಷಕ ಮುಂತಾದ ಇತರ ವೃತ್ತಿಗಳತ್ತ ಗಮನ ಹರಿಸುತ್ತಾರೆ. ಆದರೆ, ಪ್ರತಿಯೊಂದು ಮನೆಯಿಂದ ಒಬ್ಬ ಮಗ ಸೇನೆಗೆ ಹೋಗಲೇಬೇಕು. ಮೊದಲು ಒಂದು ನೌಕರಿ ಬೇಕು ಎಂಬುದಾಗಿ ಗ್ರಾಮಗಳಲ್ಲಿ ಜನರು ಯೋಚಿಸುತ್ತಾರೆ. 10 ಮತ್ತು 12ನೇ ತರಗತಿ ಪಾಸಾದ ಬಳಿಕ ಕೆಲಸ ಸಿಗುವುದು ಸೇನೆಯಲ್ಲಿ ಮಾತ್ರ’’ ಎಂದು ನಿರಂಜನ್ ಹೇಳಿದರು.

ಚಾಹರ್‌ಬತ್ತಿಯ ಯುವಕರು ಮತ್ತು ಹಿರಿಯರಿಬ್ಬರೂ ಇದೇ ಅಭಿಪ್ರಾಯವನ್ನು ಹೊಂದಿ ದ್ದಾರೆ. ನೆರೆಯ ಮಾಲ್ಪುರ ಗ್ರಾಮದಲ್ಲಿ ಸೇನಾ ಪ್ಯಾರಾಟ್ರೂಪರ್‌ಗಳು ನಿಯಮಿತವಾಗಿ ಇಳಿಯುವುದನ್ನು ಸ್ಥಳೀಯರು ವರ್ಷಗಳಿಂದ ನೋಡುತ್ತಾ ಬಂದಿದ್ದಾರೆ.

ಭಾರತೀಯ ಸೇನೆಯು ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಕಳೆದ ಎರಡು ವರ್ಷ ಗಳಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಿದೆ. ಹಾಗಾಗಿ, 23 ವರ್ಷದ ದೀಪೇಶ್‌ರ ವಯೋಮಿತಿ ಮೀರಿದೆ. ‘‘ನಾವು ಚಿಕ್ಕವರಿದ್ದಾಗಿನಿಂದಲೂ ಪ್ಯಾರಾಟ್ರೂಪರ್‌ಗಳು ಆಕಾಶದಿಂದ ಇಳಿಯುವು ದನ್ನು ನೋಡುತ್ತಾ ಬಂದಿದ್ದೇವೆ. ನಾವು ಅವರನ್ನು ನೋಡಿದಾಗ, ನಾವು ಕೂಡ ಅವರ ಹಾಗೆ ಆಗಬೇಕು ಅನಿಸುತ್ತದೆ. ಸೇನಾ ನೇಮಕಾತಿ ಆರಂಭವಾಗುವಾಗ ಸುಮಾರು 500 ಯುವಕರು ಮೈದಾನದಲ್ಲಿ ಹಾಜರಿರುತ್ತಾರೆ’’ ಎಂದು ಅವರು ಹೇಳಿದರು.

ದೈಹಿಕವಾಗಿ ಸದೃಢರಾಗಿರುವ ಯುವಕರು ದೈಹಿಕ ಪರೀಕ್ಷೆಗಳಲ್ಲಿ ಸುಲಭವಾಗಿ ತೇರ್ಗಡೆ ಗೊಂಡರೆ, ಇತರರು ಲಿಖಿತ ಪರೀಕ್ಷೆಗಳತ್ತ (ಸೈನಿಕ- ಟ್ರೇಡ್ಸ್‌ಮನ್, ಸೈನಿಕ- ತಾಂತ್ರಿಕ) ಹೆಚ್ಚಿನ ಗಮನ ಹರಿಸುತ್ತಾರೆ’’ ಎಂದು ಚಾಹರ್‌ಬತ್ತಿಯ ಕಿರಾವೊಲಿ ಪ್ರದೇಶದ ಸಕತ್‌ಪುರ ಗ್ರಾಮದ ನಿವಾಸಿ 24 ವರ್ಷದ ರಾಹುಲ್ ಕುಮಾರ್ ಹೇಳುತ್ತಾರೆ. ಕಲಿಯುವಿಕೆಯಲ್ಲಿ ಹೆಚ್ಚು ಜಾಣರಲ್ಲ ದವರು ಅಥವಾ ಶಿಕ್ಷಣಕ್ಕಾಗಿ ಹೆಚ್ಚಿನ ಖರ್ಚು ಮಾಡಲು ಅಸಾಧ್ಯವಾಗಿರುವವರು ಜನರಲ್ ಡ್ಯೂಟಿ ಸೈನಿಕರಾಗಿ ಸೇನೆಗೆ ಸೇರಲು ಸಿದ್ಧತೆಗಳನ್ನು ಮಾಡುತ್ತಾರೆ.

ಚಿಂತೆಯ ಕಾರ್ಮೋಡ

ಭವಿಷ್ಯದ ಅಗ್ನಿವೀರ್ ಅಭ್ಯರ್ಥಿಗಳಿಗೆ ಸೇನೆಯು ಜೂನ್ 20ರಂದು ಶರತ್ತುಗಳನ್ನು ಹೊರಡಿಸಿದೆ. ಖಾಯಂ ಸೈನಿಕರಾಗಿ ಸೇನೆಗೆ ಸೇರಲು ಅಗ್ನಿವೀರರು ಹಾಕುವ ಅರ್ಜಿಗಳನ್ನು ನಾಲ್ಕು ವರ್ಷಗಳ ಗುತ್ತಿಗೆ ಅವಧಿಯಲ್ಲಿನ ಅವರ ನಿರ್ವಹಣೆ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತದೆ ಎಂದು ಅದು ಹೇಳಿದೆ. ಖಾಯಂ ನೇಮಕಾತಿಗಾಗಿ ಮತ್ತೆ ಪರೀಕ್ಷೆಗಳನ್ನು ನಡೆಸುವ ಪ್ರಸ್ತಾವ ಇಲ್ಲದಿದ್ದರೂ, ಇನ್ನೊಂದು ಪರೀಕ್ಷೆಯನ್ನು ನಡೆಸಲಾಗುತ್ತದೆ ಎನ್ನುವ ಬಗ್ಗೆ ಸೇನಾಕಾಂಕ್ಷಿಗಳಲ್ಲಿ ಒಮ್ಮತವಿದೆ.

‘‘ಬುದ್ಧಿವಂತರನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ತೇರ್ಗಡೆಯಾಗದಿದ್ದರೆ ಮುಂದೆ ನಾವೇನು ಮಾಡುವುದು? ನೇಮಕಾತಿಯು ಕೇವಲ ಒಂದು ಪರೀಕ್ಷೆಯ ಆಧಾರದಲ್ಲಿ ನಡೆಯು ವುದಾದರೆ, ಘಟಕದ ಕಮಾಂಡಿಂಗ್ ಅಧಿಕಾರಿಯ ರಾಗದ್ವೇಷಗಳಿಗೆ ನಾವು ಬಲಿಪಶುವಾಗುವ ಸಾಧ್ಯತೆಯಿಲ್ಲವೇ?’’ ಎಂದು ದೀಪೇಶ್ ಪ್ರಶ್ನಿಸುತ್ತಾರೆ.

ನಾಗರಿಕ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಕೌಶಲಗಳನ್ನು ಪಡೆಯಲು ಅಗಿ ್ನ ವೀರರಿಗೆ ನೆರವಾಗುವ ವಿಶೇಷ ಮೂರು ವರ್ಷಗಳ ಕೌಶಲಾಧಾರಿತ ಸ್ನಾತಕ ಪದವಿಯೊಂದನ್ನು ಆರಂಭಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂಬ ವರದಿಗಳಿವೆ. ಆದರೆ, ಈ ಬಗ್ಗೆ ಚಾಹರ್‌ಬತ್ತಿಯ ಯುವಕರಿಗೆ ಯಾವುದೇ ಮಾಹಿತಿಯಿಲ್ಲ.

‘‘25 ವರ್ಷ ವಯಸ್ಸಿನಲ್ಲಿ ನಾವು ನಮ್ಮಿಂದ ತುಂಬಾ ಮುಂದಿರುವವರೊಂದಿಗೆ ಸ್ಪರ್ಧಿಸಬೇ ಕಾಗುತ್ತದೆ. ನಾವು ಮತ್ತೊಮ್ಮೆ ಪರೀಕ್ಷೆಗಳು, ಕಾಲೇಜು ಸೇರ್ಪಡೆ ಮತ್ತು ಅಧ್ಯಯನ ಎಂಬ ಅದೇ ಸರಪಣಿಯ ಮೂಲಕ ಹಾದು ಹೋಗಬೇಕಾಗುತ್ತದೆ. ಇವುಗಳನ್ನು ನಮ್ಮದೇ ವಯಸ್ಸಿನ ನಾಗರಿಕರು ಅದಾಗಲೇ ಮುಗಿಸಿರುತ್ತಾರೆ. ನಮಗೆ ಕಾವಲುಗಾರನ ಕೆಲಸ ಮಾತ್ರ ಸಿಗುತ್ತದೆ ಎಂದು ನನಗನಿಸುತ್ತದೆ’’ ಎಂದು ಅನಿಲ್ ಹೇಳುತ್ತಾರೆ.

‘ಅಗ್ನಿಪಥ್’ ಯೋಜನೆಯು ಅಸ್ಪಷ್ಟವಾಗಿದೆ ಎಂದು ನಿವೃತ್ತ ಸೇನಾ ಕರ್ನಲ್ ವಿ.ಪಿ.ಎಸ್. ಚೌಹಾನ್ ಹೇಳುತ್ತಾರೆ. ಲಕ್ಷಾಂತರ ಸೇನಾಕಾಂಕ್ಷಿಗಳ ಪ್ರಶ್ನೆಗಳು ಮತ್ತು ಸಂದೇಹಗಳಿಗೆ ಉತ್ತರ ಕಂಡುಕೊಳ್ಳುವ ಮುನ್ನವೇ ಯೋಜನೆಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸರಕಾರ ತಪ್ಪುಮಾಡಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

‘‘ಸೇನೆ ಎನ್ನುವುದು ಒಂದು ಸಂಘಟನೆ. ರೆಜಿಮೆಂಟ್‌ಗಳಲ್ಲಿರುವವರ ನಡುವಿನ ಹಾರ್ದಿಕ ಸಂಬಂಧ ಮತ್ತು ಆತ್ಮೀಯತೆಯಿಂದಾಗಿ ಸೇನೆಗೆ ಸಾಧನೆ ಮಾಡಲು ಸಾಧ್ಯವಾಗಿದೆ. ಯುವಕರ ಕಳವಳ ಸಹಜವಾಗಿದೆ. ಯಾಕೆಂದರೆ ನಾಲ್ಕು ವರ್ಷಗಳಲ್ಲಿ ಯುವಕರು ತರಬೇತಿ ಹಂತದಲ್ಲಷ್ಟೇ ಇರುತ್ತಾರೆ. ಅವರನ್ನು ಮುಂಚೂಣಿಯಲ್ಲಿ ನಿಯೋಜಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳುತ್ತಾರೆ.

‘‘ಈ ಯೋಜನೆಯನ್ನು ಅವಸರದಿಂದ ಘೋಷಿಸಲಾಗಿದೆ ಎನಿಸುತ್ತದೆ. ಅದರ ಹಿಂದಿರುವ ತರ್ಕವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಇಲ್ಲಿ ಸಂವಹನದ ಕೊರತೆಯೂ ಇದೆ’’ ಎಂದು ಅವರು ನುಡಿದರು.

ಕೃಪೆ: theprint.in

Writer - ಶಿಖಾ ಸಲರಿಯ

contributor

Editor - ಶಿಖಾ ಸಲರಿಯ

contributor

Similar News