ಪತ್ರಕರ್ತೆ ರಾಣಾ ಅಯ್ಯೂಬ್ ಖಾತೆಯನ್ನು ಭಾರತದಲ್ಲಿ ತಡೆಹಿಡಿದ ಟ್ವಿಟರ್

Update: 2022-06-27 07:24 GMT

 ಹೊಸದಿಲ್ಲಿ: ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಟ್ವಿಟ್ಟರ್ ಖಾತೆಯನ್ನು  ಭಾರತದಲ್ಲಿ ಇಲ್ಲಿನ ಮಾಹಿತಿ ತಂತ್ರಜ್ಞಾನ ಖಾತೆ, 2020 ಅನ್ವಯ ತಡೆಹಿಡಿಯಲಾಗಿದೆ ಎಂದು ಪತ್ರಕರ್ತೆಗೆ ಟ್ವಿಟ್ಟರ್ ಮಾಹಿತಿ ನೀಡಿದೆ.

ತನಗೆ ಟ್ವಿಟ್ಟರ್‌ನಿಂದ ಬಂದ ನೋಟಿಸ್ ಅನ್ನು ರಾಣಾ ಆಯ್ಯೂಬ್ ಅವರು ಪೋಸ್ಟ್ ಮಾಡಿ "ಹಲೋ ಟ್ವಿಟ್ಟರ್, ನಿಖರವಾಗಿ ಏನಿದು?" ಎಂದು ಪ್ರಶ್ನಿಸಿದ್ದಾರೆ.

"ಭಾರತದ ಸ್ಥಳೀಯ ಕಾನೂನುಗಳನ್ನು ಪಾಲಿಸಬೇಕಿರುವ ಟ್ವಿಟ್ಟರ್ ನ ಬದ್ಧತೆಯ ಭಾಗವಾಗಿ ನಾವು ಈ ಕೆಳಗಿನ ಖಾತೆಯನ್ನು  ಭಾರತದಲ್ಲಿ ಆ ದೇಶದ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಅನ್ವಯ ತಡೆಹಿಡಿದಿದ್ದೇವೆ. ಆದರೆ ಈ ಖಾತೆ ಬೇರೆಡೆಯಲ್ಲಿ ಲಭ್ಯವಿದೆ, ನಮ್ಮ ಸೇವೆಯನ್ನು ಬಳಸುವ ಜನರನ್ನು ಸಮರ್ಥಿಸುವ ಹಾಗೂ ಅವರ ದನಿಗೆ ಗೌರವಿಸುವುದನ್ನು ಟ್ವಿಟ್ಟರ್ ಬಲವಾಗಿ ನಂಬಿದೆ ಆದರೆ ಅವರ ಖಾತೆಯಿಂದ ಕಂಟೆಂಟ್ ತೆಗೆದು ಹಾಕಲು ಅಧಿಕಾರಸ್ಥ ಪ್ರಾಧಿಕಾರದಿಂದ ನಮಗೆ ಕಾನೂನಾತ್ಮಕ ಮನವಿ ಬಂದರೆ ಖಾತೆದಾರರಿಗೆ ಮಾಹಿತಿ ನೀಡುವುದು ನಮ್ಮ ನೀತಿಯಾಗಿದೆ. ಮನವಿ ಬಂದ ದೇಶದಲ್ಲಿ ಬಳಕೆದಾರರು ವಾಸಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಪರಿಗಣಿಸದೆ ನಾವು ನೋಟಿಸ್ ನೀಡುತ್ತೇವೆ" ಎಂದು ಟ್ವಿಟ್ಟರ್ ನೀಡಿದ ನೋಟಿಸ್‍ನಲ್ಲಿ ತಿಳಿಸಲಾಗಿದೆ. ಸದ್ಯ ಅವರ ಖಾತೆ ಟ್ವಿಟರ್‌ ನಲ್ಲಿ ಸಕ್ರಿಯವಾಗಿಯೇ ಇದೆ. 

ಈ ನೋಟಿಸ್ ಪೋಸ್ಟ್ ಮಾಡಿ ರಾಣಾ ಅಯ್ಯೂಬ್ ಮಾಡಿದ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಅಮೆರಿಕಾದ ಹಿರಿಯ ಟೆನಿಸ್ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವ "ಹಾಗಿದ್ದರೆ ಮುಂದೆ ಯಾರು?" ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಕುರಿತು ಟ್ವೀಟ್‌ ಮಾಡುತ್ತಿದ್ದ ಅಂತಾರಾಷ್ಟ್ರೀಯ ಪತ್ರಕರ್ತ ಸಿಜೆ ವೆಲ್ಮನ್‌ ಅವರ ಖಾತೆಯನ್ನೂ ಕೇಂದ್ರ ಸರಕಾರದ ಮನವಿಯ ಮೇರೆಗೆ ತಡೆಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News