×
Ad

ದೇಶವು ಏಕಪಕ್ಷ ಆಡಳಿತದತ್ತ ಸಾಗುತ್ತಿದೆ, ಬಿಜೆಪಿ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸಲಾಗುತ್ತಿದೆ:‌ ಗೋಪಾಲ ರಾಯ್

Update: 2022-06-27 20:50 IST

ಹೊಸದಿಲ್ಲಿ,ಜೂ.27: ಕೇಂದ್ರವು ಬಿಜೆಪಿ ವಿರುದ್ಧ ಧ್ವನಿಯೆತ್ತುವ ಪ್ರತಿಪಕ್ಷಗಳನ್ನು ದಮನಿಸಲು ನಾಚಿಕೆಯಿಲ್ಲದೆ ಜಾರಿ ನಿರ್ದೇಶನಾಲಯ (ಈ.ಡಿ.)ವನ್ನು ಬಳಸಿಕೊಳ್ಳುತ್ತಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ಹಿರಿಯ ಆಪ್ ನಾಯಕ ಗೋಪಾಲ ರಾಯ್ ಅವರು,ದೇಶವು ಏಕ-ಪಕ್ಷ ಆಡಳಿತದತ್ತ ಸಾಗುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಯ್,ಬಿಜೆಪಿ ವಿರುದ್ಧ ಧ್ವನಿಯೆತ್ತುವ ಎಲ್ಲ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರಕಾರವು ಈ.ಡಿ.ಯನ್ನು ದುರುಪಯೋಗಿಸಿಕೊಳ್ಳುತ್ತಿದೆ ಎನ್ನುವುದು ಈಗ ಗುಟ್ಟಿನ ವಿಷಯವಾಗಿ ಉಳಿದಿಲ್ಲ. ಹಿಂದೆಯೂ ಕೇಂದ್ರೀಯ ಸಂಸ್ಥೆಗಳ ದುರುಪಯೋಗ ನಡೆದಿತ್ತು. ಆದರೆ ಅದು ಈಗ ಬಹಿರಂಗವಾಗಿ ಮತ್ತು ರಾಜಾರೋಷ ನಡೆಯುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News