ಸಹೋದ್ಯೋಗಿಯಿಂದ ಗುಂಡಿನ ದಾಳಿ: ಇಬ್ಬರು ಸೈನಿಕರು ಮೃತ್ಯು

Update: 2022-06-28 02:11 GMT
ಸಾಂದರ್ಭಿಕ ಚಿತ್ರ (PTI)

ಪಠಾಣ್‍ಕೋಟ್ (ಪಂಜಾಬ್): ಸಹ ಸೈನಿಕನ ಗುಂಡಿನ ದಾಳಿಯಿಂದ ಇಬ್ಬರು ಸೈನಿಕರು ಜೀವ ಕಳೆದುಕೊಂಡ ಘಟನೆ ಪಂಜಾಬ್‍ನ ಪಠಾಣ್‍ಕೋಟ್ ಜಿಲ್ಲೆಯ ಮಿರ್ಥಾಲ್ ಕಾಂಟಿನೆಂಟ್‍ನಲ್ಲಿ ಸಂಭವಿಸಿದೆ.

22 ವರ್ಷದ ಸಿಪಾಯಿ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಇಬ್ಬರು ಹವಾವಾಲ್ದಾರರ ಮೇಲೆ ಗುಂಡು ಹಾರಿಸಿದ ಎಂದು ಪೊಲೀಸರು ಹೇಳಿದ್ದಾರೆ. ಈ ಆರೋಪಿ ಸೈನಿಕ ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದು, ತನ್ನ ಬಂದೂಕನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಆ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ದಾಳಿಗೆ ಏನು ಕಾರಣ ಎನ್ನುವುದನ್ನು ಪತ್ತೆ ಮಾಡಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.

ಮುಂಜಾನೆ ನಿದ್ದೆಯಲ್ಲಿದ್ದಾಗ ಗುಂಡಿನ ದಾಳಿಯ ಸದ್ದು ಕೇಳಿಬಂತು ಎಂದು ದೂರು ನೀಡಿದ ನಾಯಕ್ ಶ್ರೇಣಿಯ ಸೇನಾ ಅಧಿಕಾರಿ ಹೇಳಿದ್ದಾರೆ. ತಕ್ಷಣ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಗಾಯಾಳುಗಳನ್ನು ಪಠಾಣ್‍ಕೋಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು ಎಂದು ವಿವರಿಸಿದ್ದಾರೆ.

ಆರೋಪಿಯ ಪತ್ತೆಗೆ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ವ್ಯಾಪಕ ಜಾಲ ಬೀಸಿ, ಘಟನಾ ಸ್ಥಳದಿಂದ ಕೆಲ ಕಿಲೋಮೀಟರ್ ದೂರದಲ್ಲಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News