ಕೋವಿಡ್ ಹೆಚ್ಚಳ | ಕೇರಳದಲ್ಲಿ ಮತ್ತೆ ಮಾಸ್ಕ್ ಧರಿಸುವುದು ಕಡ್ಡಾಯ: ಸರಕಾರ ಆದೇಶ

Update: 2022-06-28 07:22 GMT
ಸಾಂದರ್ಭಿಕ ಚಿತ್ರ (source: PTI)

ಕಾಸರಗೋಡು, ಜೂ.28: ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಮತ್ತೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಸಾರ್ವಜನಿಕ ಸ್ಥಳ ಹಾಗೂ ಜನನಿಬಿಡ ಹಾಗೂ ಉದ್ಯೋಗ ನಿರ್ವಹಿಸುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಹನಗಳಲ್ಲಿ  ಪ್ರಯಾಣಿಸುವವರು ಕೂಡಾ ಮಾಸ್ಕ್  ಧರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕೆಲದಿನಗಳಿಂದ ಕೊರೋನ ಪಾಸಿಟಿವ್ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಸರಕಾರ ಈ ಆದೇಶ ಹೊರಡಿಸಿದೆ.

ಮಾಸ್ಕ್ ಕುರಿತಂತೆ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಲಾಗಿದ್ದು, ಮಾಸ್ಕ್ ಧರಿಸುವ ಆದೇಶ ಉಲ್ಲಂಘಿಸಿದಲ್ಲಿ ದಂಡ ಹಾಗೂ ಕೇಸು ದಾಖಲಿಸುವಂತೆ ಸೂಚಿಸಲಾಗಿದೆ.

ಕೋವಿಡ್ ಸೋಂಕು ಇಳಿಕೆಯಾದ ಹಿನ್ನಲೆಯಲ್ಲಿ  ಮಾಸ್ಕ್ ಕಡ್ಡಾಯ ಆದೇಶ ಹಿಂದೆಗೆದುಕೊಳ್ಳಲಾಗಿತ್ತು.

ಸೋಮವಾರ ಕೇರಳದಲ್ಲಿ 2,994 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಕಾಸರಗೋಡಿನಲ್ಲಿ 31 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News