ನಾಝಿ ಯಾತನಾಶಿಬಿರದ ಮಾಜಿ ಕಾವಲುಗಾರನಿಗೆ ಜೈಲು ಶಿಕ್ಷೆ

Update: 2022-06-28 16:51 GMT
PHOTO: NDTV

ಬರ್ಲಿನ್,ಜೂ.28: 1939-1945ರ ನಡುವೆ ನಡೆದ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ನಾಝಿಗಳ ಶ್ಯಾಶೆನ್ಹ್ಯೂಸೆನ್ ಯಾತನಾಶಿಬಿರದಲ್ಲಿ ಕಾರ್ಯನಿರ್ವಹಿಸಿದ್ದ 101 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಹತ್ಯಾಕಾಂಡಕ್ಕೆ ನೆರವಾದ ಆರೋಪದಲ್ಲಿ ದೋಷಿ ಎಂದು ಪರಿಗಣಿಸಿ ಜರ್ಮನಿಯ ನ್ಯಾಯಾಲಯವೊಂದು ಸೋಮವಾರ ತೀರ್ಪು ನೀಡಿದೆ.

ನ್ಯೂರೂಪ್ಪಿನ್ ಪ್ರಾಂತೀಯ ನ್ಯಾಯಾಲಯವು ಕಾರಾಗೃಹಕ್ಕೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಯಾತನಾಶಿಬಿರದಲ್ಲಿ ಕಾವಲುಗಾರನಾಗಿ ಕಾರ್ಯನಿರ್ವಹಿಸಿದ್ದ ಈತ ಸಾವಿರಾರು ಖೈದಿಗಳ ಹತ್ಯೆಗೆ ಸಹಕರಿಸಿದ್ದನೆಂದು ಆರೋಪಿಸಲಾಗಿತ್ತು. ಆದರೆ ಆತ ತಾನು ಯಾತನಾಶಿಬಿರದಲ್ಲಿ ಕಾರ್ಯನಿರ್ವಹಿಸದ್ದೆನೆಂಬುದನ್ನು ನ್ಯಾಯಾಲಯದಲ್ಲಿ ನಿರಾಕರಿಸಿದ್ದನು. ತಾನು ಆ ಅವಧಿಯಲ್ಲಿ ಈಶಾನ್ಯ ಜರ್ಮನಿಯ ಪಾಸೆವಾಕ್ ಸಮೀಪ ಕೃಷಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆಂದು ಆತ ಹೇಳಿಕೊಂಡಿದ್ದ.

ಆದಾಗ್ಯೂ ನ್ಯಾಯಾಲಯವು ಆತನ ವಾದವನ್ನು ಪುರಸ್ಕರಿಸಲಿಲ್ಲ. ಆರೋಪಿಯು 1942-45ರ ನಡುವೆ ಬರ್ಲಿನ್ ಹೊರವಲಯದಲ್ಲಿದ್ದ ಯಾತನಾಶಿಬಿರದಲ್ಲಿ ಮೂರು ವರ್ಷ ಕಾವಲುಗಾರನಾಗಿ ಕೆಲಸ ಮಾಡಿದ್ದ ಹಾಗೂ ಹಿಟ್ಲರ್ನ ನಾಝಿ ಪಕ್ಷದ ಅರೆಸೇನಾ ಪಡೆಯ ನೋಂದಾಯಿತ ಸದಸ್ಯನೂ ಆಗಿದ್ದನೆಂದು ವಿಚಾರಣೆಯಲ್ಲಿ ದೃಢಪಟ್ಟಿದೆಯಂದು ನ್ಯಾಯಾಲಯ ತೀರ್ಪಿನ ವೇಳೆ ತಿಳಿಸಿದೆ. ‘‘ನಿಮ್ಮ ಚಟುವಟಿಕೆಯೊಂದಿಗೆ ನೀವು ಇಚ್ಛಾಪೂರ್ವಕವಾಗಿ ಸಾಮೂಹಿಕ ಹತ್ಯಾಕಾಂಡವನ್ನು ಬೆಂಬಲಿಸಿದ್ದೀರಿ’’ ಎಂದು ನ್ಯಾಯಾಧೀಶ ಲೆಶೆರ್ಮ್ಯಾನ್ ಆರೋಪಿಗೆ ತಿಳಿಸಿದ್ದಾರೆಂದು ಜರ್ಮನಿಯ ಸುದ್ದಿಸಂಸ್ಥೆ ಡಿಪಿಎ ವರದಿ ಮಾಡಿದೆ.
101 ವರ್ಷದ ಈ ವ್ಯಕ್ತಿಯ ವಿಚಾರಣೆಯನ್ನು ಜರ್ಮನಿಯ ಬ್ರಾಂಡೆನ್ಬರ್ಗ್ನಲ್ಲಿರುವ ಜಿಮ್ನೇಸಿಯಂನ ಆವರಣದಲ್ಲಿ ನಡೆಸಲಾಗಿತ್ತು.

ಹಿಟ್ಲರ್ನ ನಾಝಿ ಆಡಳಿದ ಕಾಲದಲ್ಲಿನ ಯಾನಾಶಿ ಬಿರಗಳು ಅತ್ಯಂತ ಕುಖ್ಯಾತವಾಗಿದ್ದು, ಸಾವಿರಾರು ಮಂದಿ ನರಮೇಧವನ್ನು ಅವುಗಳಲ್ಲಿ ನಡೆಸಲಾಗಿತ್ತು. ಎರಡನೆ ಮಹಾಯುದ್ಧ ಕಾಲದಲ್ಲಿ ಯಾತನಾಶಿಬಿರಗಳನ್ನು ನಿರ್ಮಿಸಿ ಅದರಲ್ಲಿ ಯಹೂದಿಗಳು ಹಾಗೂ ತನ್ನ  ವಿರೋಧಿಗಳನ್ನು ಚಿತ್ರಹಿಂಸೆ ನೀಡಿ ಹತ್ಯೆಗೈಯುತ್ತಿತ್ತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News