ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿರುವ ಸಂವಿಧಾನದ ಕಾಲಾಳುಗಳು

Update: 2022-06-29 05:11 GMT

ಎರಡನೇ ಬಾರಿ ಮೋದಿ ಸರಕಾರ ದ್ವೇಷ ರಾಜಕಾರಣದ ಅಜೆಂಡಾದ ಮೇಲೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಮೇಲೆ ನಾಗರಿಕ ಸಮಾಜ ಹಾಗೂ ಭಿನ್ನಮತಗಳ ಮೇಲೆ ಪ್ರಭುತ್ವದ ಹಾಗೂ ಸಂಘಪರಿವಾರದ ಅಸಾಂವಿಧಾನಿಕ ಹಂತಕ ಪಡೆಗಳ ದಾಳಿಗಳು ಹೆಚ್ಚಾಗುತ್ತಿವೆ. ಹಾಗೆಯೇ ಪ್ರಜಾತಂತ್ರವನ್ನು ಇಂತಹ ದಾಳಿಗಳಿಂದ ರಕ್ಷಿಸಬೇಕಾಗಿದ್ದ ಸಾಂವಿಧಾನಿಕ ಸಂಸ್ಥೆಗಳು ಮೋದಿ ಸರಕಾರದ ರಾಜಕೀಯ ಸಿದ್ಧಾಂತದ ಅಂಗಸಂಸ್ಥೆಗಳಾಗಿ ಅಧಃಪತನಗೊಳ್ಳುತ್ತಿವೆ.



‘‘ಜನರ ಪ್ರಾಣ ಹಾಗೂ ಅಸ್ತಿಗಳನ್ನು ರಕ್ಷಿಸಬೇಕಾದವರಿಗೆ ಮತ್ತು ನಡೆದ ಭೀಕರ ಕೃತ್ಯಗಳ ಬಗ್ಗೆ ನಿಷ್ಪಕ್ಷ ತನಿಖೆಯನ್ನು ಖಾತ್ರಿಪಡಿಸಬೇಕಾದವರಿಗೆ ಅದರ ಬಗ್ಗೆ ಯಾವುದೇ ಕಾಳಜಿ ಇದ್ದಂತಿಲ್ಲ. ಈ ಪ್ರಕರಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಆರೋಪಿಗಳೇ ನಿಜವಾದ ಹಂತಕರೇ ಎಂಬುದು ಒಂದು ಮುಕ್ತ ಹಾಗೂ ನಿಷ್ಪಕ್ಷಪಾತಿ ವಿಚಾರಣೆಯಿಂದ ಮಾತ್ರ ತಿಳಿದುಬರಲು ಸಾಧ್ಯ. ಆದರೆ ಬೆಸ್ಟ್ ಬೇಕರಿ ಪ್ರಕರಣದಲ್ಲಿ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಸುಟ್ಟು ಕರಕಲಾಗುತ್ತಿರುವಾಗ ಆಧುನಿಕ ಕಾಲದ ನೀರೋ ದೊರೆಗಳು ತಮ್ಮ ಗಮನವನ್ನು ಬೇರೆತ್ತಲೋ ಹರಿಸಿದ್ದಾರೆ. ಪ್ರಾಯಶಃ ಅವರು ಈ ದಾಳಿಕೋರರನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಸಮಾಲೋಚನೆ ನಡೆಸುತ್ತಿದ್ದಿರಬಹುದು’’

-ಜಸ್ಟೀಸ್ ಅರಿಜಿತ್ ಪಸಾಯತ್, ಜಸ್ಟೀಸ್ ದೊರೆರಾಜು- ಸುಪ್ರೀಂಕೋರ್ಟ್- 2004
- (ಗುಜರಾತ್ ಹತ್ಯಾಕಾಂಡದ ಹಲವು ಪ್ರಕರಣಗಳ ಬಗ್ಗೆ ನರೇಂದ್ರ ಮೋದಿ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಕಟುವಾಗಿ ಆಕ್ಷೇಪಿಸುತ್ತಾ..)

ಆರೆಸ್ಸೆಸ್-ಬಿಜೆಪಿ ಕೂಟದ ಹಿಂದುತ್ವ-ಕಾರ್ಪೊರೇಟ್ ಕಾಳಾಳುಗಳು ಈ ದೇಶದ ಪ್ರಜಾತಂತ್ರವನ್ನು ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಭೀತಿ, ಆಮಿಷ ಹಾಗೂ ದಮನಗಳಿಂದ ಕೊಂದುಹಾಕುತ್ತಿರುವಾಗ ತೀಸ್ತಾ ಸೆಟಲ್ವಾಡ್‌ರಂತಹ ಸಂವಿಧಾನದ ಕಾಲಾಳುಗಳು ತಮ್ಮ ಜೀವದ ಹಂಗುತೊರೆದು ನಿರಂತರವಾಗಿ ಪ್ರಜಾತಂತ್ರದ ಉಳಿವಿಗೆ ಹೋರಾಡುತ್ತಾ ಬಂದಿದ್ದಾರೆ. ಪ್ರತೀಕ್ ಸಿನ್ಹಾ, ಮುಹಮ್ಮದ್ ಝುಬೈರ್‌ರಂತಹವರು ನಿರಂತರವಾಗಿ ಮತ್ತು ದಿಟ್ಟವಾಗಿ ಪ್ರತಿಕ್ಷಣ ಆಳುವಕೂಟದ ಸುಳ್ಳುಗಳನ್ನು ಬಯಲುಗೊಳಿಸುತ್ತಾ ಬಂದಿದ್ದಾರೆ. ಆದರೆ ಎರಡನೇ ಬಾರಿ ಮೋದಿ ಸರಕಾರ ದ್ವೇಷ ರಾಜಕಾರಣದ ಅಜೆಂಡಾದ ಮೇಲೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಮೇಲೆ ನಾಗರಿಕ ಸಮಾಜ ಹಾಗೂ ಭಿನ್ನಮತಗಳ ಮೇಲೆ ಪ್ರಭುತ್ವದ ಹಾಗೂ ಸಂಘಪರಿವಾರದ ಅಸಾಂವಿಧಾನಿಕ ಹಂತಕ ಪಡೆಗಳ ದಾಳಿಗಳು ಹೆಚ್ಚಾಗುತ್ತಿವೆ. ಹಾಗೆಯೇ ಪ್ರಜಾತಂತ್ರವನ್ನು ಇಂತಹ ದಾಳಿಗಳಿಂದ ರಕ್ಷಿಸಬೇಕಾಗಿದ್ದ ಸಾಂವಿಧಾನಿಕ ಸಂಸ್ಥೆಗಳು ಮೋದಿ ಸರಕಾರದ ರಾಜಕೀಯ ಸಿದ್ಧಾಂತದ ಅಂಗಸಂಸ್ಥೆಗಳಾಗಿ ಅಧಃಪತನಗೊಳ್ಳುತ್ತಿವೆ.

ಇಲ್ಲದಿದ್ದರೆ, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರಾದ ನ್ಯಾ. ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ, ಭಾರತದ ಪ್ರಜಾತಂತ್ರಕ್ಕೆ ಅತೀ ದೊಡ್ಡ ಕಳಂಕವಾಗಿರುವ 2002ರ ಗುಜರಾತ್ ನರಮೇಧದಲ್ಲಿ ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಯಾವ ಪಾತ್ರವೂ ಇರಲಿಲ್ಲವೆಂದು ಕ್ಲೀನ್‌ಚಿಟ್ ಕೊಡುತ್ತಿತ್ತೇ?

ಅಷ್ಟು ಮಾತ್ರವಲ್ಲ, ಅಧಿಕಾರಸ್ಥರೆಲ್ಲರನ್ನೂ ಎದುರುಹಾಕಿಕೊಂಡು, ಜೀವದ ಹಂಗು ತೊರೆದು ನ್ಯಾಯಕ್ಕಾಗಿ 16 ವರ್ಷಗಳ ಕಾಲ ಸಂತ್ರಸ್ತರಿಗೆ ಹೋರಾಡಲು ಸಹಾಯ ಮಾಡಿದ್ದನ್ನೇ ದುರುದ್ದೇಶ ಮತ್ತು ದುರಹಂಕಾರವೆಂದು ಬಣ್ಣಿಸಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಲು ಪರೋಕ್ಷ ಆದೇಶ ನೀಡುತ್ತಿತ್ತೇ? ಗುಜರಾತ್‌ನಲ್ಲಿ ನರಮೇಧ ನಡೆಯಲು ಪೊಲೀಸರ ಪರೋಕ್ಷ ಪಾಲುದಾರಿಕೆಯಿತ್ತೆಂದೂ ಹಾಗೂ ಪೊಲೀಸರು ಹಾಗೆ ಮಾಡಲು ಮೋದಿಯವರ ನಿರ್ದೆಶನವಿತ್ತೆಂದು ಧೈರ್ಯವಾಗಿ ಬಹಿರಂಗಗೊಳಿಸಿದ ಗುಜರಾತಿನ ಅತ್ಯಂತ ಪ್ರಾಮಾಣಿಕ ಉನ್ನತ ಪೊಲೀಸ್ ಅಧಿಕಾರಿಗಳಾದ ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ಅವರ ಮೇಲೆ ಕಿಡಿಗೇಡಿತನದ ಆರೋಪ ಹೊರಿಸುತ್ತಿತ್ತೇ? ಸ್ವತಂತ್ರ ವಿವೇಚನೆ ಹಾಗೂ ವಿಚಕ್ಷಣೆಯನ್ನು ಬಳಸದೆ ದೂರುದಾರರ ಬಗ್ಗೆ ಗುಜರಾತ್ ಸರಕಾರ ಹೇಳಿದ್ದನ್ನೆಲ್ಲಾ ಏಕಪಕ್ಷೀಯವಾಗಿ ಒಪ್ಪಿಕೊಳ್ಳುತ್ತಿತ್ತೇ? ಅದೆಲ್ಲಕ್ಕಿಂತ ಹೆಚ್ಚಾಗಿ.. ಗುಜರಾತ್ ಪೊಲೀಸ್ ಮತ್ತು ಎಸ್‌ಐಟಿ ಮಾಡಿದ ಆರೋಪಕ್ಕೆ ಪ್ರತಿಯಾಗಿ ಈ ಮೂವರು ತಮ್ಮ ಅಭಿಪ್ರಾಯ ಅಥವಾ ಪ್ರತಿವಾದಗಳನ್ನು ಮುಂದಿಡಲು ಯಾವ ಅವಕಾಶವನ್ನೂ ಕೊಡದೆ, ಸಹಜನ್ಯಾಯದ ಯಾವ ಮಾನದಂಡಗಳನ್ನೂ ಅನುಸರಿಸದೆ ಅವರ ಅನುಪಸ್ಥಿತಿಯಲ್ಲಿ ತನ್ನ ನ್ಯಾಯಾದೇಶದಲ್ಲಿ ಅವರನ್ನು ಬಂಧಿಸಬೇಕೆಂಬ ಪರೋಕ್ಷ ಸೂಚನೆ ಕೊಡುತ್ತಿತ್ತೇ? ಹೀಗಾಗಿಯೇ ಸುಪ್ರೀಂ ಕೋರ್ಟ್ ಗುಜರಾತ್ ನರಮೇಧದಲ್ಲಿ ನರೇಂದ್ರ ಮೋದಿಯವರ ಯಾವುದೇ ಪಾತ್ರವೂ ಇಲ್ಲ ಮತ್ತು ನರಮೇಧದ ಹಿಂದೆ ಯಾವುದೇ ಮಹಾನ್ ಸಂಚಾಗಲೀ ಇಲ್ಲವೆಂದು ಖಾನ್ವಿಲ್ಕರ್ ಪೀಠ ಆದೇಶ ಕೊಟ್ಟ ಕೆಲವೇ ಗಂಟೆಗಳಲ್ಲಿ ಗುಜರಾತ್ ಪೊಲೀಸ್‌ನ ಭಯೋತ್ಪಾದಕ ನಿಗ್ರಹ ದಳ ತೀಸ್ತಾ ಮತ್ತು ಶ್ರೀಕುಮಾರ್ ಅವರನ್ನು ಬಂಧಿಸಿತು. ಸಂಜೀವ್ ಭಟ್ ಅವರನ್ನಂತೂ, ಮೋದಿ ವಿರುದ್ಧ ಸಾಕ್ಷ ನುಡಿದ ತಪ್ಪಿಗೆ ಸುಳ್ಳು ಕೇಸಿನಲ್ಲಿ ಸಿಲುಕಿಸಿ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟಿನ ಖಾನ್ವಿಲ್ಕರ್ ಪೀಠ ಮುಂದಿಡುತ್ತಿರುವ ಕಾರಣವೆಂದರೆ:

ತೀಸ್ತಾ ಮತ್ತು ಈ ಇಬ್ಬರು ಅಧಿಕಾರಿಗಳು ಗುಜರಾತ್ ನರಮೇಧದಲ್ಲಿ ನರೇಂದ್ರ ಮೋದಿಯವರ ಪಾತ್ರದ ಬಗ್ಗೆ ಹಾಗೂ ಆ ನರಮೇಧದ ಹಿಂದೆ ಒಂದು ದೊಡ ಸಂಚಿತ್ತು ಎಂಬ ಬಗ್ಗೆ ಯಾವುದೇ ಪುರಾವೆ ಇಲ್ಲದಿದ್ದರೂ, ಸಂತ್ರಸ್ತೆಯಾದ ಝಕಿಯಾ ಜಾಫ್ರಿಯವರಿಗೆ ಇರಬಹುದಾದ ಭಾವೋದ್ವೇಗವನ್ನು ದುರ್ಬಳಕೆ ಮಾಡಿಕೊಂಡು 16 ವರ್ಷಗಳಿಂದ ಕೋರ್ಟಿನಲ್ಲಿ ಸಮರ ಮಾಡುತ್ತಿದ್ದಾರೆ. ಹಾಗೂ ಕೋರ್ಟನ್ನೂ ಒಳಗೊಂಡಂತೆ ಎಸ್‌ಐಟಿ ಹಾಗೂ ಪೊಲೀಸ್ ಯಾವ ಸಂಸ್ಥೆಗಳ ಘನತೆಯ ಬಗ್ಗೆಯೂ ನಂಬಿಕೆ, ಗೌರವ ತೋರದೆ ದುರಹಂಕಾರದಿಂದ ಹಾಗೂ ದುರುದ್ದೇಶದಿಂದ ನಡೆದುಕೊಂಡಿದ್ದಾರೆ ಎಂಬುದಾಗಿದೆ.

ಗುಜರಾತ್ ನರಮೇಧ ಮತ್ತು ಸಂಘೀ ಷಡ್ಯಂತ್ರ 

ಗುಜರಾತ್ ನರಮೇಧವು ಏಕಾಏಕಿ ಸಂಭವಿಸಿದ್ದಲ್ಲ. ಅದರ ಭೀಕರ ಸ್ವರೂಪ ಹಾಗೂ ಅದನ್ನು ಯೋಜಿತವಾಗಿ ನಡೆಸಿದ ರೀತಿಯನ್ನು ನೋಡಿದರೆ ಇದರ ಹಿಂದೆ ಒಂದು ಸ್ಪಷ್ಟ ಯೋಜನೆ ಇದ್ದದ್ದು ಗೊತ್ತಾಗುತ್ತದೆ. ಸರಕಾರಗಳು ಅದರಲ್ಲೂ ಮೋದಿ ಯವರನ್ನು 2001ರಲ್ಲಿ ಗುಜರಾತಿಗೆ ಮುಖ್ಯಮಂತ್ರಿಯಾಗಿ ನೇಮಿಸಿದ ಮೇಲೆ ಆಡಳಿತರೂಢ ಪಕ್ಷದ ಸಿದ್ಧಾಂತವರ್ತಿಗಳಾದ ಪತ್ರಿಕೆಗಳು ಮತ್ತು ಸಂಘಟನೆಗಳು ನಿರಂತರವಾಗಿ ಮುಸ್ಲಿಮರ ಮೇಲೆ ಇಲ್ಲಸಲ್ಲದ ನೆಪಗಳನ್ನು ಮತ್ತು ಸುಳ್ಳುಗಳನ್ನು ಬಳಸಿಕೊಂಡು ದ್ವೇಷವನ್ನು ಸಂಘಟಿಸಿದವು. ಮೋದಿ ನೇತೃತ್ವದ ಸರಕಾರ ಹಾಗೂ ಖುದ್ದು ಮೋದಿ ತಮ್ಮ ಭಾಷಣ ಹಾಗೂ ಕ್ರಮಗಳಿಂದಾಗಿ ಈ ದ್ವೇಷಕ್ಕೆ ಮತ್ತಷ್ಟು ಪುಷ್ಟಿ ಹಾಗೂ ಸರಕಾರಿ ರಕ್ಷಣೆ ಕೊಟ್ಟರು. 2002ರ ಫೆಬ್ರವರಿ 27ರ ಬೆಳಗ್ಗೆ ಅಯೋಧ್ಯೆಯಿಂದ ಗುಜರಾತಿಗೆ ಬಂದ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಬೋಗಿಗೆ ಗೋಧ್ರಾದಲ್ಲಿ ಕಿಡಿಗೇಡಿ ಗುಂಪೊಂದು ಬೆಂಕಿ ಹಚ್ಚಿತು. (ಆದರೆ ಈ ಬೆಂಕಿಗೆ ಕಾರಣ ರೈಲಿನ ಒಳಗಿನದ್ದೇ ಹೊರತು ಹೊರಗಿಂದ ಬೆಂಕಿ ಬಿದ್ದಿದ್ದಲ್ಲ ಎಂದು ಬ್ಯಾನರ್ಜಿ ಸಮಿತಿ ಹೇಳಿದೆ. ಹಾಗೂ ಅದರಿಂದಾಗಿ ಎಸ್-6 ಬೋಗಿಯಲ್ಲಿ ಸುಟ್ಟುಹೋದ 59 ಜನರೆಲ್ಲರೂ ಹಿಂದೂಗಳೆಂದೋ ಅಥವಾ ತೀರ್ಥಯಾತ್ರಿಗಳೆಂದೋ ರುಜುವಾತಾಗಿಲ್ಲ. ಆದರೂ ಸದ್ಯಕ್ಕೆ ಇವೆರಡನ್ನೂ ಪಕ್ಕಕ್ಕಿಡೋಣ). ಇದರಿಂದಾಗಿ 59 ಜನರು ಬೋಗಿಯಲ್ಲಿ ದಹಿಸಿಹೋದರು. ಆಗ ಒಂದು ಜವಾಬ್ದಾರಿಯುತ ಸರಕಾರವೇನು ಮಾಡಬೇಕು? ಕೂಡಲೇ ಅದಕ್ಕೆ ಕಾರಣರಾದವರನ್ನು ಬಂಧಿಸಬೇಕು ಮತ್ತು ಈ ಕೃತ್ಯವನ್ನು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಂಡು ಅಮಾಯಕರ ಮೇಲೆ ದಾಳಿ ಮಾಡಿ ಸಮಾಜದ ಶಾಂತಿ ಭಂಗ ಮಾಡದಂತೆ ಮುಂಜಾಗರೂಕತಾ ಮತ್ತು ಶಾಂತಿ-ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಕೃತ್ಯಕ್ಕೆ ಕಾರಣರಾದವರ ಸಾಮಾಜಿಕ ಚಹರೆಗಳನ್ನು ಬಳಸಿಕೊಂಡು ಕೋಮುಗಲಭೆಗಳು ಉಂಟಾಗದಂತೆ ಶಾಂತಿಸ್ಥಾಪನಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಕೇಂದ್ರದಲ್ಲಿ ಹಾಗೂ ಗುಜರಾತಿನಲ್ಲಿದ್ದ ಬಿಜೆಪಿ ಸರಕಾರ ಹಾಗೂ ಮೋದಿ ನಡೆದುಕೊಂಡಿದ್ದು ತದ್ವಿರುದ್ಧ ರೀತಿಯಲ್ಲಿ.

ಆಗ ಕೇಂದ್ರ ಗೃಹಮಂತ್ರಿಯಾಗಿದ್ದ ಬಿಜೆಪಿ ನಾಯಕ ಅಡ್ವಾಣಿಯವರು ಯಾವುದೇ ಪುರಾವೆಯಿಲ್ಲದಿದ್ದರೂ ಗೋಧ್ರಾ ಹತ್ಯೆಗಳನ್ನು ಮಾಡಿದ್ದು ಮುಸ್ಲಿಮ್ ಭಯೋತ್ಪಾದಕರು ಎಂದು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹೇಳಿಕೆ ಇತ್ತರು ಹಾಗೂ ಇದಕ್ಕೆ ತಕ್ಕ ಉತ್ತರ ಕೊಡಲಾಗುವುದು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿಯವರು ಹೇಳಿಕೆ ಕೊಟ್ಟರು. ಸಾಮಾನ್ಯವಾಗಿ ಇಂತಹ ಕೃತ್ಯಗಳು ನಡೆದಾಗ ಮೃತ ದೇಹಗಳ ಸಾರ್ವಜನಿಕ ಪ್ರದರ್ಶನ ವಿವೇಚನಾ ರಹಿತ ಸಾಮಾಜಿಕ ಉನ್ಮಾದ ಹುಟ್ಟಿಸುತ್ತವಾದ್ದರಿಂದ ಸರಕಾರ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹಾಥರಸ್ ಪ್ರಕರಣದಲ್ಲಿ ಯೋಗಿ ಸರಕಾರ ಮೃತದೇಹವನ್ನು ಅವರ ಪೋಷಕರಿಗೂ ಒಪ್ಪಿಸದೆ, ಅವರ ಅನುಮತಿಯನ್ನು ಪಡೆದುಕೊಳ್ಳದೆ ಸುಟ್ಟುಹಾಕಿದ್ದಂತೂ ಇನ್ನು ಕಣ್ಣಮುಂದೆಯೇ ಇದೆ. ಆದರೆ ಗೋಧ್ರಾದಲ್ಲಿ ಬಲಿಯಾದವರ ಮೃತದೇಹಗಳನ್ನು ಅಹಮದಾಬಾದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲು ವಿಶ್ವಹಿಂದೂ ಪರಿಷತ್ತಿಗೆ ಮೋದಿ ಸರಕಾರ ಅನುಮತಿ ನೀಡಿತು. ಇದರ ಹಿಂದೆ ಯಾವ ತರ್ಕವಿತ್ತು? ಹಾಗೂ ಈ ಮೆರವಣಿಗೆಯ ಉದ್ದೇಶ ಮತ್ತು ಪರಿಣಾಮಗಳನ್ನು ನಿಯಂತ್ರಿಸಲು ಸರಕಾರ ಮಾಡಿಕೊಂಡಿದ್ದ ತಯಾರಿಗಳೇನು ಎಂಬುದನ್ನು ನೋಡಿದರೆ ನಂತರ ನಡೆದ ನರಮೇಧದಲ್ಲಿ ನರೇಂದ್ರ ಮೋದಿ ಸರಕಾರದ ಬೇಜವಾಬ್ದಾರಿತನದ ಪಾಲು ಸಾಬೀತು ಮಾಡಲು ಯಾವ ಎಸ್‌ಐಟಿಯೂ ಬೇಕಾಗಿರಲಿಲ್ಲ.

ಪೊಲಿಸ್ ಆಧಿಕಾರಿಗಳ ಆದೇಶ

ಫೆಬ್ರವರಿ 27 ರಂದು ರಾತ್ರಿ 11 ಗಂಟೆಗೆ ಮುಖ್ಯಮಂತ್ರಿ ಮೋದಿಯವರು ಅತ್ಯುನ್ನತ ಪೊಲಿಸ್ ಅಧಿಕಾರಿಗಳ ಸಭೆಯನ್ನು ಕರೆಯುತ್ತಾರೆ. ಅದರಲ್ಲಿ ಭಾಗವಹಿಸಿದ್ದ ಆಗಿನ ಪೊಲೀಸ್ ಬೇಹುಗಾರಿಕಾ ಇಲಾಖೆಯ ಡೆಪ್ಯುಟಿ ಕಮಿಷನರ್ ಸಂಜೀವ್ ಭಟ್ ಅವರು ನಂತರ ನೀಡಿದ ಹೇಳಿಕೆಯ ಪ್ರಕಾರ ಆ ಸಭೆಯಲ್ಲಿ ನರೇಂದ್ರ ಮೋದಿಯವರು ‘‘ಮರುದಿನ ಹಿಂದೂಗಳು ತಮ್ಮ ಆಕ್ರೋಶವನ್ನು ಹೊರಹಾಕುವುದಕ್ಕೆ ಪೊಲೀಸರು ಯಾವುದೇ ತಡೆಯನ್ನು ಒಡ್ಡಬಾರದು’’ ಎಂದು ಮೌಖಿಕ ಆದೇಶ ಕೊಡುತ್ತಾರೆ. ನಂತರದಲ್ಲಿ ಆಗಿನ ಹಿರಿಯ ಎಡಿಜಿಪಿಯಾಗಿದ್ದ ಶ್ರೀಕುಮಾರ್ ಅವರೂ ನಾನಾವತಿ ಕಮಿಷನ್ ಮುಂದೆ ಹೇಳಿಕೆ ನೀಡುತ್ತಾ ಹಲವಾರು ಪೊಲೀಸ್ ಆಧಿಕಾರಿಗಳು ತಮಗೆ ಹಂತಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಮೇಲಿನಿಂದ ಆದೇಶ ಬಂದಿದೆ ಎಂದು ಹೇಳಿದ್ದರು ಎಂದು ದಾಖಲಿಸಿದ್ದಾರೆ. ಗುಜರಾತ್ ನರಮೇಧ ನಡೆದ ನಂತರ ರಾಕೇಶ್ ಶರ್ಮಾ ಅವರು ಗುಜರಾತ್ ನರಮೇಧದ ಬಗ್ಗೆ ತೆಗೆದ ‘ಫೈನಲ್ ಸೆಲ್ಯೂಶನ್’ ಎಂಬ ಡಾಕ್ಯುಮೆಂಟರಿಗಾಗಿ ಬಾಬಾ ಬಜರಂಗಿ ಎಂಬ ಹಂತಕನ ಸಂದರ್ಶನವನ್ನು ಬೇರೊಂದು ನೆಪದಲ್ಲಿ ತೆಗೆದುಕೊಳ್ಳುತ್ತಾರೆ. ಈತ ಅಹಮದಾಬಾದಿನ ನರೋಡಾ ಪಾಟಿಯಾದಲ್ಲಿ 60ಕ್ಕೂ ಹೆಚ್ಚು ಜನರನ್ನು ಕಗ್ಗೊಲೆ ಮಾಡಿದ ಅಪರಾಧವು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. (ಆ ನಂತರ, ಮೋದಿಯವರು ಪ್ರಧಾನಿಯಾದ ಮೇಲೆ ಕೋರ್ಟ್ ಆತನಿಗೆ ಮೆಡಿಕಲ್ ಜಾಮೀನು ನೀಡಿದೆ.) ಈತ ರಾಕೇಶ್ ಶರ್ಮಾ ಅವರಿಗೆ ನೀಡಿದ ಸಂದರ್ಶನದಲ್ಲಿ ‘‘ಮೋದಿಯವರು ಇಲ್ಲದಿದ್ದರೆ ನಾವು ಹಿಂದೂಗಳು ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. ಅವರು ಕೊಟ್ಟ ಆದೇಶದಿಂದಾಗಿ ಪೊಲೀಸರ ಕಣ್ಣೆದುರಿಗೇ ನಾವು ಹತ್ಯೆಗಳನ್ನು ನಡೆಸುತ್ತಿದ್ದರೂ ಅವರು ಪಕ್ಕಕ್ಕೆ ಸರಿದು ನಮಗೆ ಸರಾಗವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು’’ ಎಂದು ಹೇಳಿದ್ದಾನೆ.
(ಆಸಕ್ತರು ಈ ವೀಡಿಯೊದಲ್ಲಿ 6ನೇ ನಿಮಿಷದಿಂದ ಇರುವ ಬಜರಂಗಿ ಸಂದರ್ಶನವನ್ನು ನೋಡಬಹುದು :https://www.youtube.com/watch?v=aXLbArGJC6M) ಅಷ್ಟು ಮಾತ್ರವಲ್ಲದೆ, ಆ ನಂತರದಲ್ಲಿ ಗುಜರಾತ್ ನರಮೇಧದಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಗುಪ್ತ ಸಂದರ್ಶನವನ್ನು ಆಧರಿಸಿ ಪತ್ರಕರ್ತ ಅಶೀಸ್ ಕೇತನ್ ಅವರು ತಮ್ಮ "Undercover' ಎಂಬ ಪುಸ್ತಕದಲ್ಲೂ, ರಾಣಾ ಅಯ್ಯೂಬ್ ಅವರು ತಮ್ಮ "Gujarat Files' ಪುಸ್ತಕದಲೂ ಗುಜರಾತ್ ನರಮೇಧ ನಡೆಯಲು ಮೋದಿ ಸರಕಾರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೀಡಿದ ಸಹಕಾರಗಳ ವರದಿಯನ್ನು ಕೊಡುತ್ತದೆ. ಸಂಘೀ ಹಂತಕರ ಬೀಭತ್ಸ-ಸರಕಾರದ ಸಹಕಾರ

ಈ ಕಾರಣಗಳಿಂದಾಗಿಯೇ 2002ರ ಫೆಬ್ರವರಿ 27, 28 ಮತ್ತು ಮಾರ್ಚ್ 1ರಂದು ಸಂಘಪರಿವಾರದ ಹಂತಕ ಪಡೆಗಳು ಮುಸ್ಲಿಮರ ಕ್ರೂರ ನರಮೇಧ ನಡೆಸಿದರು. ಆ ಬೀಭತ್ಸ ಹಿಂಸಾಚಾರದಲ್ಲಿ ಸರಕಾರಿ ಅಂದಾಜಿನ ಪ್ರಕಾರವೇ 1,200 ಜನರು (ಅದರಲ್ಲಿ ಶೇ. 90 ಭಾಗ ಮುಸ್ಲಿಮರು) ಕೊಲೆಯಾದರು. ಸಾವಿರಾರು ಮಹಿಳೆಯರು (ಮುಸ್ಲಿಮರು) ಅತ್ಯಾಚಾರಕ್ಕೆ ಗುರಿಯಾದರು. ಕೌಸರ್ ಬಾನು ಎಂಬ ಗರ್ಭಿಣಿಯ ಹೊಟ್ಟೆಯನ್ನು ಬಗೆದು ಭ್ರೂಣವನ್ನು ತ್ರಿಶೂಲಕ್ಕೆ ಸಿಕ್ಕಿಸಿ ಮೆರವಣಿಗೆ ನಡೆಸಿದರು. ಬೆಸ್ಟ್ ಬೇಕರಿಯಲ್ಲಿ ಅವಿತಿಟ್ಟುಕೊಂಡಿದ್ದ ಹತ್ತಾರು ಮುಸ್ಲಿಮರನ್ನು ಜೀವಂತ ಸುಟ್ಟುಹಾಕಲಾಯಿತು. ನರೋಡಾ ಪಾಟಿಯಾ ಎಂಬ ಕಾಲನಿಯಲ್ಲಿ 5,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಂತಕರ ಗುಂಪು ನೂರಕ್ಕೂ ಹೆಚ್ಚು ಜನರನ್ನು ಕೊಚ್ಚಿ ಕೊಚ್ಚಿ ಸಾಯಿಸಿತು. ಅದಕ್ಕೆ ಮೋದಿ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಮಾಯಾ ಕೊಡ್ನಾನಿಯವರೇ ಮುಂದಾಳತ್ವ ವಹಿಸಿದ್ದರು. ಅದು ಸಾಬೀತಾಗಿ ಅವರಿಗೆ 28 ವರ್ಷಗಳ ಶಿಕ್ಷೆಯೂ ಆಯಿತು. (ಆದರೆ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಮತ್ತೊಂದು ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿತು). ಬಿಲ್ಕಿಸ್ ಬಾನು ಎಂಬ ಮಹಿಳೆಯನ್ನು 20 ಹಂತಕರ ಗುಂಪು ಸಾಮೂಹಿಕ ಅತ್ಯಾಚಾರ ಮಾಡಿತಲ್ಲದೆ ಜೊತೆಗಿದ್ದವರನ್ನು ಕೊಂದುಹಾಕಿತು.

ಗುಲ್ಬರ್ಗ್ ಸೊಸೈಟಿ ಎಂಬಲ್ಲಿ ಈ ಹಿಂದೆ ಕಾಂಗ್ರೆಸ್ ಸಂಸದರಾಗಿದ್ದ ಎಹ್ಸಾನ್ ಜಾಫ್ರಿಯವರ ಮನೆಯ ಮೇಲೆ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಗುಂಪು ದಾಳಿ ಮಾಡಿತು. ಮಾಜಿ ಸಂಸದರೊಬ್ಬರು, ತಮ್ಮ ಮನೆಯಲ್ಲಿ ಭಯದಿಂದ ಆಶ್ರಯ ಪಡೆದಿದ್ದ 69 ಜನರನ್ನು ರಕ್ಷಿಸಬೇಕೆಂದು ಸತತವಾಗಿ ಪೊಲೀಸರಿಗೆ ಮೊರೆ ಇಟ್ಟರೂ ಯಾವ ಸಹಾಯವೂ ಬರುವುದಿಲ್ಲ. ಕೊನೆಗೆ ಅವರೇ ಉಳಿದವರನ್ನು ರಕ್ಷಿಸಲು ಹಂತಕ ಗುಂಪಿಗೆ ಶರಣಾಗುತ್ತಾರೆ. ಆ ಹಂತಕ ಗುಂಪು ಅವರ ಹೆಂಡತಿ ಝಕಿಯಾ ಜಾಫ್ರಿಯವರ ಕಣ್ಣೆದುರಿಗೇ ಅವರನ್ನು ತುಂಡುತುಂಡಾಗಿ ಕತ್ತರಿಸಿ ಜೀವಂತವಿರುವಾಗಲೇ ಬೆಂಕಿಹಚ್ಚಿ ಭೀಕರವಾಗಿ ಕೊಲ್ಲುತ್ತದೆ. ಆ ನಂತರ ಇಡೀ ಮನೆಗೆ ಬಂಕಿ ಹಚ್ಚಿ 69 ಜನರನ್ನು ಕೊಂದುಹಾಕುತ್ತದೆ. ಇಂತಹ ನೂರಾರು ಕೃತ್ಯಗಳು ನಡೆಯುವಾಗ ಪೊಲೀಸರು ಒಂದೋ ಮುಸ್ಲಿಮರಿಗೆ ಸಹಾಯ ಮಾಡುವುದಿಲ್ಲ. ಇಲ್ಲವೇ ತಾವೇ ಹತ್ಯೆ ಮಾಡಲು ಬೇಕಾದ ಉಪಕರಣಗಳನ್ನು ಸರಬರಾಜು ಮಾಡುತ್ತಾರೆ. ಇದನ್ನು ತಡೆಗಟ್ಟಲು ಅರೆಸೇನಾಪಡೆಗಳು ಮಾರ್ಚ್ 1ಕ್ಕೆ ಅಹಮದಾಬಾದಿಗೆ ಬಂದರೂ ಅವರು ಗಲಭೆ ಪ್ರದೇಶಕ್ಕೆ ತೆರಳಲು ಬೇಕಿರುವ ವಾಹನ ಹಾಗೂ ಇತರ ಸೌಕರ್ಯಗಳನ್ನು ಒದಗಿಸಲು ಮೋದಿ ಸರಕಾರ ಒಂದು ದಿನ ತಡ ಮಾಡುತ್ತದೆ. ಇದನ್ನು ಬಹುಪಾಲು ಸ್ವತಂತ್ರ ಸತ್ಯ ಶೋಧನಾ ಸಂಸ್ಥೆಗಳು ಬಯಲು ಮಾಡಿವೆ. ಆ ನಂತರದಲ್ಲಿ ಸಂತ್ರಸ್ತರು ದೂರು ಕೊಡಲು ಹೋದಾಗ ಪೊಲೀಸರು ದೂರುದಾಖಲಿಸದೆ ಸಂತ್ರಸ್ತರನ್ನು ಹೆದರಿಸಿ ಓಡಿಸುತ್ತಾರೆ. ಅಥವಾ ದೂರಿನಲ್ಲಿ ಬಿಜೆಪಿ ಅಥವಾ ಸಂಘಪರಿವಾರದ ನಾಯಕರ ಹೆಸರುಗಳಿದ್ದರೆ ಅವನ್ನು ತೆಗೆದುಹಾಕಲು ಒತ್ತಾಯ ಹಾಕುತ್ತಾರೆ. ತೀಸ್ತಾ ಸೆಟಲ್ವಾಡ್ ಎಂಬ ಆಪತ್ತಿನಲ್ಲಿ ಒದಗಿಬಂದ ಆಸರೆ ಈ ಸಂದರ್ಭದಲ್ಲೇ ತೀಸ್ತಾ ಸೆಟಲ್ವಾಡ್ ಮತ್ತು ಅವರ ಸಂಘಟನೆ ಅತ್ಯಂತ ಧೈರ್ಯದಿಂದ ಸಂತ್ರಸ್ತರ ಜೊತೆಗೆ ನಿಲ್ಲುತ್ತದೆೆ.

ಗುಜರಾತಿನಲ್ಲಿ ನಡೆದ ಹಾಗೂ ನಡೆಯುತ್ತಿರುವ ಅನ್ಯಾಯದ ಬಗ್ಗೆ ತೀಸ್ತಾ ಇಡೀ ದೇಶದ ಹಾಗೂ ಜಗತ್ತಿನ ಗಮನ ಸೆಳೆಯುತ್ತಾರೆ. ಕೋರ್ಟ್‌ಗಳ ಹಾಗೂ ಮಾನವ ಹಕ್ಕು ಸಂಸ್ಥೆಗಳ ಗಮನ ಸೆಳೆದು ಸಹಾಯಕ್ಕೆ ಧಾವಿಸುವಂತೆ ಮಾಡುತ್ತಾರೆ. ಆ ನಂತರದಲ್ಲೂ ಸಂತ್ರಸ್ತರು ನಡೆಸಿದ ಕೋರ್ಟ್ ಕಾಳಗದಲ್ಲಿ ಅವರಿಗೆ ಹೆಗಲಿಗೆ ಹೆಗಲಾಗಿ ನಿಂತು ಬಹುಪಾಲು ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾರೆ. ಬಾಬಾ ಬಜರಂಗಿ ಹಾಗೂ ಮಾಯಾಕೊಡ್ನಾನಿಯಂಥವರಿಗೆ ತೀಸ್ತಾ ಸೆಟಲ್ವಾಡ್ ಇಲ್ಲದಿದ್ದರೆ ಶಿಕ್ಷೆಯಾಗುತ್ತಿದ್ದ ಸಂಭವ ಕಡಿಮೆ. ಏಕೆಂದರೆ ನರಮೇಧ ನಡೆದ ಸಂದರ್ಭದಲ್ಲೂ ಆ ನಂತರದಲ್ಲೂ ಮೋದಿ ಮತ್ತವರ ಸರಕಾರ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಹಂತಕರಿಗೆ ಸಹಕರಿಸಿತು ಮತ್ತು ಆಧುನಿಕ ಮೋದಿಯವರು ಆಧುನಿಕ ನೀರೋ ದೊರೆಯಂತೆ ಕಾರ್ಯನಿರ್ವಹಿಸಿದರು ಎಂದು ಹೇಳಿದ್ದು ತೀಸ್ತಾ ಸೆಟಲ್ವಾಡ್ ಅಲ್ಲ. ಸಾಕ್ಷಾತ್ ಸುಪ್ರೀಂ ಕೋರ್ಟೇ. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ವರ್ಮ ಅವರು ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ಮುಖ್ಯಸ್ಥರಾಗಿದ್ದರು. ಗುಜರಾತ್ ನರಮೇಧ ಹಾಗೂ ಆ ನಂತರದಲ್ಲಿ ಮೋದಿ ಸರಕಾರ ಮಾಡುತ್ತಿರುವ ನ್ಯಾಯದ ಕಗ್ಗೊಲೆಗಳನ್ನು ಗಮನಿಸಿ ಅವರ ನೇತೃತ್ವದ ಅಯೋಗ ಕೆಲವು ಪ್ರಮುಖ ಪ್ರಕರಣಗಳನ್ನಾದರೂ ಸಿಬಿಐಗೆ ವಹಿಸಬೇಕೆಂದೂ ಸುಪ್ರೀಂ ಕೋರ್ಟ್‌ನ ಮೊರೆಹೋಗುತ್ತಾರೆ ಹಾಗೂ ಈ ಪ್ರಕರಣಗಳ ಬಗ್ಗೆ ಮೋದಿ ಸರಕಾರದಡಿಯಲ್ಲಿ ಗುಜರಾತ್ ಪೊಲೀಸು, ವಕೀಲರು ಹಾಗೊ ಕೆಳಕೋರ್ಟ್‌ಗಳು ಅಪರಾಧಿಗಳನ್ನು ರಕ್ಷಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸುತ್ತಾರೆ. ಮೋದಿ ಸರಕಾರ ಹಂತಕರನ್ನು ರಕ್ಷಿಸುತ್ತಿದೆ ಎಂದಿದ್ದ ಸುಪ್ರೀಂ ಕೋರ್ಟು

ತಮ್ಮ ಮುಂದಿರುವ ದಾಖಲೆಗಳನ್ನು ಕಂಡು ಕಂಗಾಲಾಗಿದ್ದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾ. ದೊರೆರಾಜುರವರ ಪೀಠ ಬೆಸ್ಟ್ ಬೇಕರಿ ಮತ್ತು ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಗುಜರಾತಿನಲ್ಲಿ ನ್ಯಾಯ ಸಿಗುವ ಸಾಧ್ಯತೆಗಳಿಲ್ಲವೆಂದು ಮನಗಂಡು ಆ ಪ್ರಕರಣಗಳನ್ನು 2004ರಲ್ಲಿ ಮಹಾರಾಷ್ಟ್ರಕ್ಕೆ ವರ್ಗಾಯಿಸುತ್ತಾರೆ ಹಾಗೂ ಮೋದಿ ಸರಕಾರದ ಬಗ್ಗೆ ಈ ಕೆಳಗಿನ ಕಟುವಾದ ಟಿಪ್ಪಣಿಗಳನ್ನು ಮಾಡುತ್ತಾರೆ:

‘‘ಜನರ ಪಾಣ ಹಾಗೂ ಆಸ್ತಿಗಳನ್ನು ರಕ್ಷಿಸಬೇಕಾದವರಿಗೆ ಮತ್ತು ನಡೆದ ಭೀಕರ ಕೃತ್ಯಗಳ ಬಗ್ಗೆ ಸೂಕ್ತವಾದ ಹಾಗೂ ನಿಷ್ಪಕ್ಷ ತನಿಖೆಯನ್ನು ಖಾತ್ರಿಪಡಿಸಬೇಕಾದವರಿಗೆ ಅದರ ಬಗ್ಗೆ ಯಾವುದೇ ಕಾಳಜಿ ಇದ್ದಂತಿಲ್ಲ. ಈ ಪ್ರಕರಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಆರೋಪಿಗಳೇ ನಿಜವಾದ ಹಂತಕರೇ ಎಂಬುದು ಒಂದು ಮುಕ್ತ ಹಾಗೂ ನಿಷ್ಪಕ್ಷಪಾತಿ ವಿಚಾರಣೆಯಿಂದ ಮಾತ್ರ ತಿಳಿದುಬರಲು ಸಾಧ್ಯ. ಆದರೆ ಬೆಸ್ಟ್ ಬೇಕರಿ ಪ್ರಕರಣದಲ್ಲಿ ಅಮಾಯಕ ಮಹಿಳೆಯರು ಮತ್ತು ಮಕ್ಕಳು ಸುಟ್ಟು ಕರಕಲಾಗುತ್ತಿರುವಾಗ ಆಧ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News