×
Ad

ಗುವಾಹಟಿಯಿಂದ ಗೋವಾಕ್ಕೆ ತೆರಳಲು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರು ಸಜ್ಜು

Update: 2022-06-29 10:13 IST
Photo:PTI

ಹೊಸದಿಲ್ಲಿ: ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರು ಇಂದು ಬಿಜೆಪಿ ಅಧಿಕಾರದಲ್ಲಿರುವ ಇನ್ನೊಂದು ರಾಜ್ಯವಾಗಿರುವ ಗೋವಾಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ  ನಾಳೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲ ಭಗತ್ ಸಿಂಗ್  ಆದೇಶಿಸಿದ್ದಾರೆ.

ಶಿವಸೇನೆಯ ಬಂಡುಕೋರರ ಗುಂಪು ಗೋವಾದ  ತಾಜ್ ರೆಸಾರ್ಟ್ ಹಾಗೂ  ಕನ್ವೆನ್ಷನ್ ಸೆಂಟರ್‌ನಲ್ಲಿ ಉಳಿಯಬಹುದು.  ಅಲ್ಲಿ 71 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ  ಖಾಸಗಿ ಜೆಟ್‌ಗಳು ಸಂಜೆ 4:30 ರ ಸುಮಾರಿಗೆ ಗೋವಾದಲ್ಲಿ ಇಳಿಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News