ಉಳ್ಳಾಲ: ವಿಪರೀತ ಮಳೆಗೆ ಮನೆಯ ಮಾಡು ಕುಸಿತ

Update: 2022-06-29 06:29 GMT

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಚೇಂಬುಗುಡ್ಡೆ ಅಂಬೇಡ್ಕರ್ ನಗರ ನಿವಾಸಿ ಭಾಸ್ಕರ್ ಎಂಬವರ ಮನೆಯ ಮಾಡು ಕುಸಿದು ಬಿದ್ದು ಹಾನಿಯಾಗಿದೆ.

ಮಂಗಳವಾರ ರಾತ್ರಿ ಮನೆ ಮಂದಿ ಮಲಗಿದ್ದರು. ಮಂಗಳವಾರ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಇದರಿಂದ ಕೊಠಡಿಯೊಳಗೆ ಮಲಗಿದ್ದ ಭಾಸ್ಕರ್ ಅವರ ಕಾಲಿಗೆ ಗಾಯವಾಗಿದೆ. ಮಾಡು ಕುಸಿದು ಮನೆಯೊಳಗೆ ಬಿದ್ದಿದ್ದು, ಇದರಿಂದ ಈ ಕುಟುಂಬ ವಾಸಕ್ಕೆ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಯುಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಮಾಧ್ಯಮ ದ ಜೊತೆ ಮಾತನಾಡಿದ ಅವರು, ಮಳೆ‌ಯಿಂದ ಮನೆಗೆ ಹಾನಿಯಾದರೆ ತುರ್ತು ಪರಿಹಾರ ಒದಗಿಸುವ ಬಗ್ಗೆ ನಾನು ಈಗಾಗಲೇ  ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದ್ದೇನೆ. ಸಂಬಂಧಪಟ್ಟ  ಅಧಿಕಾರಿಗಳಿಗೆ ಕೂಡಾ ತಿಳಿಸಿದ್ದೇನೆ. ಮನೆಯ ಅಗತ್ಯ ಸಾಮಗ್ರಿಗಳು ಹಾಳಾಗಿರುತ್ತದೆ. ಈ ಕಾರಣ ದಿಂದ ತುರ್ತು ಪರಿಹಾರವಾಗಿ ಅಲ್ಪ ಮೊತ್ತ ಸರ್ಕಾರ ನೀಡಬೇಕು. ಬಳಿಕ ಇಂಜಿನಿಯರ್ ಪರಿಶೀಲನೆ ನಡೆಸಿ ಪರಿಹಾರ ಮೊತ್ತ ನಿಗದಿ ಪಡಿಸಿ ಒದಗಿಸಬೇಕು. ಆದಷ್ಟು ಬೇಗ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ವ್ಯವಸ್ಥೆ ಮಾಡುತ್ತಾರೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಪ್ರಸಾದ್, ಗ್ರಾಮಕರಣಿಕ ಪ್ರಮೋದ್, ಇಂಜಿನಿಯರ್ ತುಳಸಿ, ಕೌನ್ಸಿಲರ್ ಬಾಜಿಲ್ ಡಿಸೋಜ , ಶಶಿಕಲಾ,  ಕಾಂಗ್ರೆಸ್ ಮುಖಂಡ ರವಿ, ಉಪಸ್ಥಿತರಿದ್ದರು.

"ಭಾಸ್ಕರ್ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಬದಲಿ ಮನೆ ಒದಗಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು".

-ಗುರುಪ್ರಸಾದ್, ತಹಶೀಲ್ದಾರ್ ಉಳ್ಳಾಲ ತಾಲೂಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News