ರಾಜ್ಯಪಾಲರು ರಫೇಲ್ ಜೆಟ್ ಗಿಂತಲೂ ಹೆಚ್ಚು ವೇಗವಾಗಿದ್ದಾರೆ: ಸಂಜಯ್ ರಾವತ್

Update: 2022-06-29 07:08 GMT
Photo:PTI

ಮುಂಬೈ/ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಾಳೆ ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಿದ ಬೆನ್ನಲ್ಲೇ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಆದೇಶದ ವಿರುದ್ಧ ಶಿವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಆಡಳಿತಾರೂಢ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ನಿಯೋಗ ಹೇಳಿದ ಒಂದು ದಿನದ ನಂತರ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ.

"ರಾಜ್ಯಪಾಲರು ಒಂದು ಜೆಟ್‌ ವೇಗದಲ್ಲಿ ಚಲಿಸುತ್ತಿದ್ದಾರೆ. ರಫೇಲ್ ಜೆಟ್ ಕೂಡ ಇಷ್ಟೊಂದು ವೇಗವಿಲ್ಲ" ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಬಹುಮತದ ಸಾಬೀತಿಗಾಗಿ ವಿಶೇಷ ಅಸೆಂಬ್ಲಿ ಅಧಿವೇಶನ ನಡೆಸುವ ರಾಜ್ಯಪಾಲರ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲಿದ್ದಾರೆ.  ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸದಿರುವಾಗ ಅಂತಹ ಯಾವುದೇ ಕ್ರಮವು 'ಕಾನೂನುಬಾಹಿರ' ಎಂದು ರಾವತ್  ಹೇಳಿದರು.

"ಈ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದೆ ಯಾವುದೇ ಬಹುಮತದ ಪರೀಕ್ಷೆ ನಡೆಯುವುದಿಲ್ಲ ಎಂದು ನಾವು ಹೇಳುತ್ತಿದ್ದೇವೆ. ನಾವು ಎಲ್ಲವನ್ನೂ ಕಾನೂನು ರೀತಿಯಲ್ಲಿ ಮಾಡಿದ್ದೇವೆ. ನಾವು ಇದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ ಮತ್ತು ಅದನ್ನು ಕಾನೂನುಬದ್ಧವಾಗಿ ತೆಗೆದುಕೊಳ್ಳುತ್ತೇವೆ. ನೀವು ನಮ್ಮ ವಿರುದ್ಧ ಹೋರಾಡಲು ಬಯಸಿದರೆ ನಮ್ಮ ವಿರುದ್ಧ ಹೋರಾಟ ಮಾಡಿ’’ ಎಂದು  ರಾವತ್ ಹೇಳಿದರು.

"ನಾನು ರಾಜ್ಯಪಾಲರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಅವರು ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ. ಆದರೆ ಈ ರೀತಿಯ ಕಾರ್ಯವು ಸಂಭವಿಸಿದರೆ, ನಾವು ಸೂಕ್ತವೆಂದು ಭಾವಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’’ಎಂದು ರಾವತ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News