ಕಾರ್ಕಳ ಪುರಸಭೆ‌ ಸಾಮಾನ್ಯ ಸಭೆ; ಒಳಚರಂಡಿ ಯೋಜನೆಯ 13 ಕೋ.ರೂ ಕಾಮಗಾರಿಯ ಲೆಕ್ಕಪತ್ರ ಬಹಿರಂಗಪಡಿಸಲು ಆಗ್ರಹ

Update: 2022-06-29 08:23 GMT

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ನಡೆದ ಒಳಚರಂಡಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಸಾರ್ವಜನಿಕ ರಿಂದ ವ್ಯಾಪಕವಾದ ಟೀಕೆಗಳು ಬಂದಿದ್ದು ಹಲವಾರು ಬಾರಿ ಸಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಬಗ್ಗೆ ಒಳಚರಂಡಿ ಮಂಡಳಿಯ ಇಂಜಿನಿಯರ್ ಬಳಿ ವಿಚಾರಿಸಿದರೂ ಯಾವುದೇ ಉತ್ತರ ಸಿಗುತ್ತಿಲ್ಲ .ಸ್ವತಹ ಇಂಜಿನಿಯರ್ ಅವರೇ ಬೇರೆಯವರ ಹೆಸರಿನಲ್ಲಿ ಕಾಮಗಾರಿ ಕಾಂಟ್ರಾಕ್ಟ್ ನಡೆಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿತ್ತು. 

ಒಳಚರಂಡಿ ಕಾಮಗಾರಿಗೆ ಬಿಡುಗಡೆಯಾದ 13 ಕೋ.ರೂ ಅನುದಾನದ ಬಳಕೆಯ ಕುರಿತು ಸಾರ್ವಜನಿಕ ಲೆಕ್ಕಪತ್ರದ ಮೂಲಕ ಬಹಿರಂಗಪಡಿಸಬೇಕೆಂದು‌ ಪುರಸಭಾ ವಿಪಕ್ಷ ಸದಸ್ಯ ಅಶ್ಪಕ್ ಅಹ್ಮದ್ ಒತ್ತಾಯಿಸಿದರು.

ಕಾರ್ಕಳ ಬಂಡೀಮಠ ಬಸ್ಸು ನಿಲ್ದಾಣಕ್ಕೆ ಬಸ್ ನಿಲುಗಡೆ ಸ್ಥಳಗಳಲ್ಲಿ ಶೆಲ್ಟರ್ ಆಳವಡಿಸಬೇಕು ಇದರಿಂದ ಮಳೆಗಾಲದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಅಲ್ಲದೇ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು  ಸಮರ್ಪಕ ವ್ಯವಸ್ಥೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಎಣ್ಣೆ ಹೊಳೆ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಯಿಂದ ಪುರಸಭಾ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹೊಂಡಮುಯವಾದ ರಸ್ತೆ ವಾಹನಗಳ ಸಂಚಾರ‌ ಮಾತ್ರವಲ್ಲ ಜನ ಸಂಚಾರಕ್ಕೂ ಅಯೋಗ್ಯವಾಗಿದೆ. ರಸ್ತೆಯಲ್ಲಿ ಕಾಮಗಾರಿ ಸಂದರ್ಭದಲ್ಲಿ ನಿರ್ಮಾಣಗೊಂಡ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚದೆ ಘನ ವಾಹನಗಳು ಕೂಡ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಪುರಸಭಾ ಸದಸ್ಯ ಶುಭದ್ ರಾವ್ ಸಭೆಯ ಗಮನಕ್ಕೆ ತಂದರು.

ಪೈಪ್ ಲೈನ್ ಸಂಪರ್ಕವು ಅಪೂರ್ಣಗೊಂಡಿದ್ದು ಯೋಜನೆಯ ಕುರಿತು ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ, ಯೋಜನೆಯ ಕಾಮಗಾರಿ  ಇನ್ನೂ ಪೂರ್ಣ ಗೊಂಡಿಲ್ಲ ಎಂದು ಯೋಜನೆಯ ಇಂಜಿನಿಯರ್ ಹೇಳಿದ್ದಾರೆ, ‌ಅಲ್ಲದೇ ಹೊಂಡಮಯ ರಸ್ತೆಗಳನ್ನು ‌ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಯೋಗಿಶ್ ದೇವಾಡಿಗ, ಪುರಸಭಾ ಸದಸ್ಯರುಗಳಾದ ಪ್ರವೀಣ್ ಶೆಟ್ಟಿ, ಹರೀಶ್ ದೇವಾಡಿಗ, ಲಕ್ಷ್ಮೀ ನಾರಾಯಣ್ ಮಲ್ಯ, ಸೋಮನಾಥ ನಾಯ್ಕ, ಅವಿನಾಶ್ ಶೆಟ್ಟಿ, ಶೋಭಾ ದೇವಾಡಿಗ, ರೆಹಮತ್ ,ಸುನೀತಾ ಶೆಟ್ಟಿ, ಮೀನಾಕ್ಷಿ ಗಂಗಾಧರ್, ಭಾರತಿ,  ಪ್ರತಿಮಾ, ನಳಿನಿ ಆಚಾರ್ಯ, ಪ್ರಭಾ, ಪ್ರಸನ್ನ ದಾನಶಾಲೆ, ಮಮತಾ, ಸಂತೋಷ ರಾವ್, ಪ್ರದೀಪ್ ಮಾರಿಗುಡಿ, ನೀತಾ ಆಚಾರ್ಯ,  ಅಶೋಕ್ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News