ಕನ್ನಯ್ಯಾಲಾಲ್ ಕುಟುಂಬವನ್ನು ಭೇಟಿ ಮಾಡಿ 51 ಲಕ್ಷ ರೂ.ಪರಿಹಾರ ನೀಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

Update: 2022-06-30 11:54 GMT
Photo: ndtv.com

ಉದಯಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ  ಕಾಂಗ್ರೆಸ್ ಶಾಸಕರೊಂದಿಗೆ ಮಂಗಳವಾರ ಹತ್ಯೆಗೀಡಾದ ಟೈಲರ್ ಕನ್ಹಯ್ಯಾ ಲಾಲ್ ಅವರ ಕುಟುಂಬವನ್ನು ಉದಯಪುರದಲ್ಲಿರುವ ಅವರ ಮನೆಯಲ್ಲಿ ಗುರುವಾರ   ಭೇಟಿ ಮಾಡಿದರು. ಪರಿಹಾರವಾಗಿ ಕುಟುಂಬಕ್ಕೆ  51 ಲಕ್ಷ ರೂ. ಚೆಕ್ ವಿತರಿಸಿದರು.

ತಮ್ಮ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್, ಘಟನೆಯ ಕುರಿತು  ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಮಾತನಾಡುವೆ  ಹಾಗೂ  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಒಂದು ತಿಂಗಳೊಳಗೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ವಿನಂತಿಸುವುದಾಗಿ ಹೇಳಿದರು.

ಇದು ರಾಜ್ಯವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಹೇಯ ಕೊಲೆಯಾಗಿದ್ದು, ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಿ ಅವರ ಅಂತರಾಷ್ಟ್ರೀಯ ನಂಟು ಪತ್ತೆ ಹಚ್ಚಿದ ರಾಜ್ಯ ಪೊಲೀಸರ ಕಾರ್ಯ ಶ್ಲಾಘನೀಯ ಎಂದರು.

ಕುಟುಂಬಕ್ಕೆ ಸರಕಾರದಿಂದ ರಕ್ಷಣೆ ನೀಡುವುದಾಗಿ ಮುಖ್ಯಮಂತ್ರಿಗಳು ನಮಗೆ ಭರವಸೆ ನೀಡಿದ್ದಾರೆ. ಹಂತಕರನ್ನು ಗಲ್ಲಿಗೇರಿಸಬೇಕೆಂದು ಸಿಎಂ ಬಳಿ ಆಗ್ರಹಿಸಿದ್ದೇವೆ ಎಂದು ಕನ್ನಯ್ಯ ಲಾಲ್ ಪುತ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News